![Money Gym by Women on Wealth - GurgaonMoms](https://gurgaonmoms.com/wp-content/uploads/2017/11/money-representational.jpg)
ಆರ್ಥಿಕ ವೃದ್ಧಿಗಾಗಿ ಪ್ರತಿದಿನ ಪ್ರತಿಯೊಬ್ಬ ವ್ಯಕ್ತಿ ಕಷ್ಟಪಡ್ತಾನೆ. ಕೆಲವೊಮ್ಮೆ ಎಷ್ಷೇ ಕಷ್ಟಪಟ್ಟರೂ ಕುಟುಂಬ ನಿರ್ವಹಣೆ ಮಾಡುವಷ್ಟು ಹಣ ಕೈಗೆ ಸಿಗೋದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 7 ದಿನ 7 ಉಪಾಯಗಳನ್ನು ಅನುಸರಿಸುವುದರಿಂದ ಧನದ ಕೊರತೆಯಾಗುವುದಿಲ್ಲ.
ಈ ಹಿಂದೆ ಹೇಳಿದಂತೆ ಮನೆಯಲ್ಲಿ ಅವಶ್ಯವಾಗಿ ತುಳಸಿ ಸಸಿ ಇರಲಿ. ಉತ್ತರ, ಪೂರ್ವ ಅಥವಾ ಮನೆಯ ಮುಂದೆ ತುಳಸಿಯನ್ನಿಡಿ. ಸಾಂಪ್ರದಾಯಿಕವಾಗಿ ಕಟ್ಟಿರುವ ಮನೆಯಲ್ಲಿ ವಾಸಿಸುವ ವ್ಯಕ್ತಿ ಹೆಚ್ಚು ಸಂತೋಷವಾಗಿರ್ತಾನೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ತುಳಸಿ ದರ್ಶನ ಮಾಡುವುದರಿಂದ ಎಲ್ಲ ಪಾಪಗಳು ನಾಶವಾಗುತ್ತವೆ. ಸ್ಪರ್ಶಿಸುವುದರಿಂದ ಶರೀರ ಪವಿತ್ರವಾಗುತ್ತದೆ. ನಮಸ್ಕಾರ ಮಾಡುವುದರಿಂದ ರೋಗ ಗುಣವಾಗುತ್ತದೆ. ತುಳಸಿಯನ್ನು ಭಗವಂತನಿಗೆ ಅರ್ಪಣೆ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಹಾಗಾಗಿ ಪ್ರತಿದಿನ ತುಳಸಿ ಪೂಜೆ, ದರ್ಶನ ಮಾಡಿ.
ಶನಿವಾರ ಮುಖ್ಯದ್ವಾರದ ಮುಂದೆ ಸಾಸಿವೆ ಎಣ್ಣೆ ದೀಪವನ್ನು ಹಚ್ಚಿ. ಸಾಧ್ಯವಾದಲ್ಲಿ ಅಶ್ವತ್ಥ ಮರವನ್ನು ಪ್ರದಕ್ಷಿಣೆ ಹಾಕಿ.
ಪ್ರತಿದಿನ ನಿಮ್ಮ ಶಕ್ತಿಗನುಗುಣವಾಗಿ ನಿರ್ಗತಿಕರಿಗೆ ದಾನ ಮಾಡಿ.
ಮಂಗಳವಾರ, ಗುರುವಾರ ಮತ್ತು ಶನಿವಾರ ಮನೆ ಮತ್ತು ಕಾರ್ಯಸ್ಥಳದಲ್ಲಿ ಧೂಪ ಹಚ್ಚಿ. ಮನೆಯ ಎಲ್ಲ ಜಾಗಕ್ಕೂ ಹೊಗೆ ಹೋಗಲಿ. ಇದರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.
ಸಂಬಳ ಬಂದ ನಂತ್ರ ಅದರ ಸ್ವಲ್ಪ ಭಾಗವನ್ನು ದೇವರ ಮುಂದಿಟ್ಟು ನಮಸ್ಕರಿಸಿ.
ಲಕ್ಷ್ಮಿಗೆ ಬಿಳಿ ಬಣ್ಣ ಬಹಳ ಇಷ್ಟ. ಶುಕ್ರವಾರ ಬಿಳಿ ಮಿಠಾಯಿಯನ್ನು ಅರ್ಪಿಸಿ.
ತಾಯಿ ಲಕ್ಷ್ಮಿಯ ಮಂತ್ರವನ್ನು ಪ್ರತಿದಿನ ಪಠಣ ಮಾಡಿ.