ಬೆಂಗಳೂರು: ಏರ್ ಇಂಡಿಯಾ ವಿಮಾನದಲ್ಲಿ ವಿಶೇಷ ಚೇತನ ವ್ಯಕ್ತಿಯನ್ನು ಅವಮಾನಿಸಲಾಗಿದೆ ಮತ್ತು ಬೋರ್ಡಿಂಗ್ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಏರ್ ಇಂಡಿಯಾ ಪೈಲಟ್ ಬೆಂಗಳೂರಿನಿಂದ ಕೋಲ್ಕತ್ತಾಗೆ ವಿಮಾನದಲ್ಲಿ ವಿಶೇಷ ಚೇತನ ಪ್ರಯಾಣಿಕರಿಗೆ ಹತ್ತಲು ನಿರಾಕರಿಸಿದ್ದಾರೆ. ಬೆಳಗ್ಗೆ 2.40ಕ್ಕೆ ಕೋಲ್ಕತ್ತಾಗೆ ತೆರಳಬೇಕಿದ್ದ ಬೆಂಗಳೂರು-ಕೋಲ್ಕತ್ತಾದ ಎಐ-748 ವಿಮಾನದ ಪೈಲಟ್, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕೌಶಿಕ್ ಕುಮಾರ್ ಮಜುಂದಾರ್ ಅವರನ್ನು ಹತ್ತದಂತೆ ತಡೆದಿದ್ದಾರೆ. ಜೊತೆಗೆ ತನ್ನನ್ನು ಅವಮಾನಿಸಲಾಗಿದೆ ಎಂದು ಕೌಶಿಕ್ ಕುಮಾರ್ ಆರೋಪಿಸಿದ್ದಾರೆ.
ಏರ್ ಇಂಡಿಯಾದ ಪೈಲಟ್ ತನ್ನ ಗಾಲಿಕುರ್ಚಿಯ ಬ್ಯಾಟರಿಯನ್ನು ಸಂಪರ್ಕ ಕಡಿತಗೊಳಿಸಿ, ನಂತರವೇ ವಿಮಾನವನ್ನು ಹತ್ತಬೇಕು ಎಂದು ಹೇಳಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ತನ್ನನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದ ನಂತರವೂ ತನಗೆ ವಿಮಾನದಲ್ಲಿ ಪ್ರಯಾಣಿಸಲು ಅನುಮತಿಸಲಿಲ್ಲ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು ಡಿಸೆಂಬರ್ 2017 ರಲ್ಲಿ, ಮಜುಂದಾರ್ ಅವರು ಏರ್ ಇಂಡಿಯಾ ಗ್ರೌಂಡ್ ಸ್ಟಾಫ್ ನಿಂದ ನಿಂದನೆಗೆ ಒಳಗಾಗಿದ್ದರು. ನಂತರ ಕೋಲ್ಕತ್ತಾಗೆ ತನ್ನ ವಿಮಾನವನ್ನು ಹತ್ತಲು ಅನುಮತಿ ನಿರಾಕರಿಸಲಾಗಿತ್ತು. ಇಂದು ಎರಡನೇ ಬಾರಿಗೆ ಮಜುಂದಾರ್ ಅವರನ್ನು ಏರ್ ಇಂಡಿಯಾ ವಿಮಾನ ಹತ್ತುವುದನ್ನು ನಿರ್ಬಂಧಿಸಲಾಗಿದೆ.