ಯುದ್ಧ ಪೀಡಿತ ಉಕ್ರೇನ್ನಿಂದ ಮರಳಿದ ಭಾರತೀಯ ವಿದ್ಯಾರ್ಥಿಯು ಕೇಂದ್ರ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಯುದ್ಧ ಪೀಡಿತ ಸ್ಥಳದಿಂದ ನಾಗರಿಕರನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳದ ಮೇಲೆ ಈ ಹೂವುಗಳನ್ನು ವಿತರಿಸಿ ನಾಟಕವಾಡುವುದು ಅರ್ಥಹೀನ ಎಂದಿದ್ದಾರೆ.
ಬಿಹಾರದ ಮೋತಿಹಾರಿ ಮೂಲದ ದಿವ್ಯಾಂಶು ಸಿಂಗ್ ಉಕ್ರೇನ್ನಲ್ಲಿ ಯುದ್ಧ ಪ್ರಾರಂಭವಾದ ಬಳಿಕ ಹಂಗೇರಿಗೆ ತೆರಳಿದ್ದರು. ಇಂದು ಮಧ್ಯಾಹ್ನ ದೆಹಲಿಗೆ ಬಂದಿಳಿದ ದಿವ್ಯಾಂಶುಗೆ ಗುಲಾಬಿಯೊಂದಿಗೆ ಸ್ವಾಗತಿಸಲಾಯ್ತು.
ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ನಿಮಗೆ ಸಹಾಯ ಸಿಕ್ಕಿತೇ….? ಎಂದು ಕೇಳಿದಾಗ ಉತ್ತರಿಸಿದ ದಿವ್ಯಾಂಶು, ನಾವು ಹಂಗೇರಿಗೆ ಬಂದ ಬಳಿಕವೇ ಸಹಾಯ ಸಿಕ್ಕಿತು, ಅದಕ್ಕೂ ಮೊದಲು ನಮಗೆ ಯಾರೂ ಸಹಾಯ ಮಾಡಿರಲಿಲ್ಲ, ನಾವು ನಮ್ಮ ಸ್ವಂತ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಸ್ಥಳೀಯರು ನಮಗೆ ತುಂಬಾನೇ ಸಹಾಯ ಮಾಡಿದರು. ಯಾರೂ ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿರಲಿಲ್ಲ. ಪೊಲೆಂಡ್ನಲ್ಲಿ ಕೆಲವು ಭಾರತೀಯರಿಗೆ ಕಿರುಕುಳ ನೀಡಲಾಗಿದೆ. ಇದಕ್ಕೆಲ್ಲ ನಮ್ಮ ಸರ್ಕಾರವೇ ಹೊಣೆ. ಸರಿಯಾದ ಸಮಯದಲ್ಲಿ ಸೂಕ್ತ ಕ್ರಮ ಕೈಗೊಂಡಿದ್ರೆ ನಮಗೆ ಇಷ್ಟೆಲ್ಲ ಸಮಸ್ಯೆ ಆಗ್ತಾ ಇರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.