
ಕೊರಟಾಲ ಶಿವ ನಿರ್ದೇಶನದ ಮೆಗಾಸ್ಟಾರ್ ಚಿರಂಜೀವಿ ಹಾಗೂ ಅವರ ಪುತ್ರ ರಾಮ್ ಚರಣ್ ಅಭಿನಯದ ‘ಆಚಾರ್ಯ’ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.
ಸಿನಿಪ್ರೇಕ್ಷಕರು ಕಾತುರದಿಂದ ಕಾಯುತ್ತಿರುವ ಜ್ಯೂ. ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ‘RRR’ ಸಿನಿಮಾ ಮಾರ್ಚ್ 25ರಂದು ತೆರೆಮೇಲೆ ಬರಲಿದ್ದು,’ಆಚಾರ್ಯ’ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಮುಂದೂಡಿದೆ.
ಇಂದು ಬಿಡುಗಡೆಯಾಗಲಿದೆ ಶ್ರೀನಗರ ಕಿಟ್ಟಿ ಅಭಿನಯದ ‘ಗೌಳಿ’ ಟೀಸರ್
ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್, ಪೂಜಾ ಹೆಗ್ಡೆ, ಕಾಜಲ್ ಅಗರ್ವಾಲ್, ಸೋನು ಸೂದ್, ಸೌರವ್ ಕಿಶೋರ್ ಸೇರಿದಂತೆ ಕನ್ನಡದ ಭಜರಂಗಿ ಲೋಕಿ ಅಭಿನಯಿಸಿದ್ದಾರೆ.
ಕೊನಿಡೆಲಾ ಪ್ರೊಡಕ್ಷನ್ ಕಂಪನಿ ಹಾಗೂ ಮ್ಯಾಟಿನಿ ಎಂಟರ್ಟೇನ್ಮೆಂಟ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ಮಣಿ ಶರ್ಮ ಸಂಗೀತ ಸಂಯೋಜನೆ ನೀಡಿದ್ದಾರೆ.