ಏಪ್ರಿಲ್ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳಲ್ಲಿ ಕಾಣುವಂತಹ ಗುಣಗಳು ಯಾವುದು. ಹಾಗೇ ಅವರು ಯಾವ ಗುಣಗಳಿಂದಾಗಿ ಬೇರೆಯವರಿಗಿಂತ ತುಂಬಾ ಭಿನ್ನವಾಗಿ ನಿಲ್ಲುವರು ಅಂತ ತಿಳಿಯೋಣ.
* ಈ ತಿಂಗಳಲ್ಲಿ ಹುಟ್ಟಿರುವ ಜನರು ತುಂಬಾ ಸ್ವತಂತ್ರರಾಗಿರುವರು. ಈ ವ್ಯಕ್ತಿಗಳು ಯಾವುದಾದರೂ ಉದ್ಯಮವನ್ನು ಆರಂಭಿಸುವರು ಮತ್ತು ಅದರಲ್ಲಿ ಇವರು ಉನ್ನತಿ ಪಡೆಯುವರು.
* ಇವರು ತಮ್ಮದೇ ಆದ ದಾರಿಯಲ್ಲಿ ಸಾಗುವರು. ಇವರಲ್ಲಿ ಇರುವಂತಹ ಆಕರ್ಷಣೀಯ ಗುಣವು ಬೇರೆಯವರನ್ನು ಆಕರ್ಷಣೆ ಮಾಡುವುದು.
* ಹಣ ಸಂಪಾದನೆ ಮಾಡಬೇಕು ಎಂದು ಬಯಸುವಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಾಧಿಸಲು ತುಂಬಾ ಕಠಿಣವಾಗಿ ಕೆಲಸ ಮಾಡುವರು.
* ಇವರು ತುಂಬಾ ಹಠವಾದಿಗಳು. ಬಲಶಾಲಿ ಮನಸ್ಸನ್ನು ಹೊಂದಿರುವ ಕಾರಣದಿಂದಾಗಿ ತಮ್ಮ ಮಾತಿನ ಬಗ್ಗೆ ದೃಢವಾದ ನಂಬಿಕೆ ಹೊಂದಿರುವರು. ಆದರೆ ಚರ್ಚೆ ಮಾಡುವಂತಹ ವ್ಯಕ್ತಿಯಲ್ಲ. ತಮ್ಮ ನಿಲುವನ್ನು ಇವರು ಯಾವತ್ತೂ ಬದಲಾವಣೆ ಮಾಡುವುದಿಲ್ಲ.
* ಇವರು ತುಂಬಾ ಪ್ರಬಲ ಎದುರಾಳಿಗಳಾಗಿರುವರು ಮತ್ತು ಇವರಿಗೆ ಸರಿಹೊಂದುವ ಹೋರಾಟ ನೀಡುವುದು ತುಂಬಾ ಕಠಿಣವಾಗಿರುವುದು.
* ಇವರು ಪ್ರಕೃತಿ ಸ್ನೇಹಿ.
* ಇವರು ಹಲವಾರು ಮಂದಿ ಸ್ನೇಹಿತರನ್ನು ಸಂಪಾದಿಸುವರು. ಈ ಸ್ನೇಹಿತರು ಇವರ ಅತ್ಯುತ್ಸಾಹವನ್ನು ಸ್ವಾಗತಿಸುವರು ಮತ್ತು ಜೊತೆಯಾಗಿ ಪ್ರಯಾಣಿಸಲು ಇಷ್ಟಪಡುವರು.
* ಇವರು ಜನ್ಮತಃ ಪ್ರವಾಸಿಗರು ಆಗಿರುವರು. ಇವರಿಗೆ ನೈಸರ್ಗಿಕವಾಗಿ ಸಾಹಸ ಮತ್ತು ಪ್ರಯಾಣಿಸುವ ಗುಣವು ಬಂದಿರುವ ಕಾರಣದಿಂದಾಗಿ ಇವರು ಹೊಸ ಹೊಸ ಪ್ರದೇಶಗಳಿಗೆ ಹೋಗಲು ಇಷ್ಟಪಡುವರು.
* ಇವರು ತುಂಬಾ ಕುತೂಹಲಿಗರು. ಈ ವ್ಯಕ್ತಿಗಳು ಯಾವಾಗಲೂ ಏನಾದರೂ ಮಾಹಿತಿ ಪಡೆಯಲು ಬಯಸುವರು. ಹೊಸ ಹೊಸ ವಿಚಾರಗಳನ್ನು ಕಲಿಯಲು ತುಂಬಾ ಉತ್ಸುಕರಾಗಿರುವರು.
* ಯಾರಾದರೂ ಇವರನ್ನು ಕಾಯಿಸಿದರೆ ಆಗ ತಾಳ್ಮೆ ಕಳೆದುಕೊಳ್ಳುವರು ಮತ್ತು ಇದರಿಂದ ತುಂಬಾ ಸುಲಭವಾಗಿ ನಿರಾಶೆಗೆ ಒಳಗಾಗುವರು.
* ಇವರದ್ದು ವಿಶ್ರಾಂತಿಯಿಲ್ಲದೆ ಇರುವ ವ್ಯಕ್ತಿತ್ವ ಆಗಿರುವ ಕಾರಣದಿಂದಾಗಿ ಯಾವಾಗಲೂ ಏನಾದರೂ ಕೆಲಸವನ್ನು ಬೇಗನೆ ಮುಗಿಸಲು ಬಯಸುವರು. ಆದರೆ ಈ ಒಂದು ಗುಣದಿಂದಾಗಿ ಇವರು ಕೆಲವೊಂದು ಸಲ ಸಂಕಷ್ಟಕ್ಕೆ ಸಿಲುಕುವುದು ಇದೆ.