alex Certify ಕಲ್ಯಾಣ ಕರ್ನಾಟಕದ ಜನತೆಗೆ ಮತ್ತೊಂದು ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲ್ಯಾಣ ಕರ್ನಾಟಕದ ಜನತೆಗೆ ಮತ್ತೊಂದು ಗುಡ್‌ ನ್ಯೂಸ್

ಬೀದರ್: ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಈ ಬಾರಿಯ ಆಯವ್ಯಯದಲ್ಲಿ 3000 ಕೋಟಿ ರೂ. ವನ್ನು ಮೀಸಲಿಟ್ಟಿದ್ದು, ಅಭಿವೃದ್ಧಿಯ ಕ್ರಿಯಾಯೋಜನೆಗಳಿಗೆ ಏಪ್ರಿಲ್ ಕೊನೆಯ ವಾರದೊಳಗೆ ಅನುಮೋದನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೀದರ್ ನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ವೈಚಾರಿಕ ಪರ್ವದ ಜೊತೆಗೆ ಅಭಿವೃದ್ಧಿ ಪರ್ವವನ್ನೂ ಸರ್ಕಾರ ತರಲಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಎಲ್ಲ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡಿ, ಆಭಿವೃದ್ಧಿ ಕಾರ್ಯಕ್ರಮಗಳು ಹಳ್ಳಿಹಳ್ಳಿಗೆ, ಮನೆಮನೆಗೆ ತಲುಪುವಂತೆ ನೋಡಿಕೊಳ್ಳಲಾಗುವುದು. ಈ ಭಾಗದಲ್ಲಿ 14000 ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗಿದೆ. ಇದರಲ್ಲಿ 5000 ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. 371 ಜೆ ಅದರ ಆಶಯ, ನ್ಯಾಯಸಮ್ಮತವಾದ ಅಭಿವೃದ್ಧಿಗೆ ಸರ್ಕಾರ ಸಂಕಲ್ಪ ಮಾಡಿದೆ ಎಂದರು.

SHOCKING NEWS: ಆಕ್ಸಿಜನ್ ಕೊರತೆ; ಆಂಬುಲೆನ್ಸ್ ನಲ್ಲಿಯೇ ಪ್ರಾಣಬಿಟ್ಟ ನವಜಾತ ಶಿಶು

ಅನುಭವ ಮಂಟಪ ಕಟ್ಟಡ ಮೇ ಮೊದಲನೆ ವಾರದಲ್ಲಿ ಅಧಿಕೃತವಾಗಿ ಪ್ರಾರಂಭವಾಗಲಿದೆ. ಸಾಮಾಜಿಕ ಹಾಗೂ ವೈಚಾರಿಕ ಚಿಂತನೆಗೆ ಅನುಭವ ಮಂಟಪ ಪ್ರೇರಣಾ ಶಕ್ತಿ ನೀಡಲಿದೆ ಎಂದು ತಿಳಿಸಿದರು.

12ನೇ ಶತಮಾನ ಭಾರತ ದೇಶಕ್ಕೆ ಪ್ರಮುಖವಾದ ಪರಿವರ್ತನಾ ಶತಮಾನ. ಸಾಮಾನ್ಯ ಜನರಿಗೆ ಆದರ್ಶಗಳನ್ನು, ಬದುಕುವ ದಾರಿಯನ್ನು ತೊರಿಸಿಕೊಟ್ಟವರು ಬಸವಣ್ಣನವರು. ಮನುಷ್ಯನ ಚಾರಿತ್ರ್ಯ ಹೇಗಿರಬೇಕು, ಕಾಯಕವೇ ಕೈಲಾಸ ಎನ್ನುವ ಮೂಲಕ ದುಡಿಮೆಯಿಲ್ಲದ ಬದುಕು ಬದುಕಲ್ಲ, ದಯವೇ ಧರ್ಮದ ಮೂಲವಯ್ಯ ಎಂದು ಇಂದಿಗೂ ಪ್ರಸ್ತುತವಾಗಿರುವ ವಿಚಾರಗಳಿಗೆ ಸ್ಪಷ್ಟತೆಯನ್ನು ಆಗಲೇ ನೀಡಿದ್ದರು ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...