ತಲೆಯಲ್ಲಿ ಏನೇನೋ ಯೋಚನೆ, ಮನಸ್ಸಿಗೆ ನೆಮ್ಮದಿಯೇ ಇಲ್ಲವಾಗಿದೆ. ಒಂದಲ್ಲ ಒಂದು ಯೋಚನೆ ಮನಸ್ಸಿನಲ್ಲಿ ಸುಳಿದಾಡುತ್ತವೆ. ಇದರಿಂದಾಗಿ ನೆಮ್ಮದಿಯೇ ಇಲ್ಲವಾಗಿದೆ ಎಂದು ಅನೇಕರು ಹೇಳುವುದನ್ನು ಕೇಳಿರುತ್ತೀರಿ.
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎನ್ನುವಂತೆ ಕೆಲವರಿಗೆ ಇನ್ನೂ ಏನೋ ಬೇಕು ಎನಿಸಿತ್ತದೆ. ಮತ್ತೆ ಕೆಲವರದಂತೂ ಚಂಚಲವಾದ ಮನಸ್ಸು. ನಿಂತಲ್ಲಿ ನಿಲ್ಲಂಗಿಲ್ಲ, ಕುಂತಲ್ಲಿ ಕೂರಂಗಿಲ್ಲ ಎನ್ನುವ ಮನೋಭಾವ. ಇವೆಲ್ಲವುಗಳ ಕಾರಣದಿಂದ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ.
ಚಂಚಲತೆ, ಆಲೋಚನೆಗಳಿಂದ ಹೊರಬರಲು ಸುಲಭ ವಿಧಾನವೆಂದರೆ ಧ್ಯಾನ. ಹೌದು, ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಕ್ಕಂತಾಗುತ್ತದೆ.
ಧ್ಯಾನ ಮಾಡುವುದರಿಂದ ಮನಸ್ಸಿನ ಮೇಲೆ ಹತೋಟಿ ಹೊಂದಿ ನಿರ್ದಿಷ್ಟವಾದ ಗುರಿಯನ್ನು ಸಾಧಿಸಬಹುದು. ಅಲ್ಲದೇ, ಒಂದೇ ವಿಷಯದ ಬಗ್ಗೆ ಹೆಚ್ಚಿನ ಗಮನಹರಿಸಬಹುದಾಗಿದೆ ಎನ್ನುತ್ತಾರೆ ತಿಳಿದವರು.