ಉಕ್ರೇನ್ ದೇಶವನ್ನು ರಷ್ಯಾ ಆಕ್ರಮಿಸಿದಾಗಿನಿಂದ ಪ್ರತಿದಿನವೂ ಸಾಮಾಜಿಕ ಮಾಧ್ಯಮಗಳಲ್ಲಿ ದಿನಕ್ಕೊಂದು ಹೃದಯ ವಿದ್ರಾವಕ ಘಟನೆಗಳು ವರದಿಯಾಗುತ್ತಲೇ ಇದೆ.
ಕಳೆದ ವಾರ ಸ್ಲೋವಾಕಿಯಾದ ಪೊಲೀಸರು 11 ವರ್ಷದ ಬಾಲಕನೊಬ್ಬ ಏಕಾಂಗಿಯಾಗಿ ಗಡಿ ದಾಟಿದಂತಹ ಮನಮುಟ್ಟುವ ಕತೆಯೊಂದನ್ನು ವಿವರಿಸಿದರು. ಬೆನ್ನಲ್ಲಿ ಒಂದು ಬ್ಯಾಗ್ ಬಿಟ್ಟರೆ ಆತನ ಕೈ ಹಿಂಭಾಗದಲ್ಲಿ ಫೋನ್ ಸಂಖ್ಯೆಯನ್ನು ಮಾತ್ರ ಬರೆಯಲಾಗಿತ್ತು.
ಉಕ್ರೇನ್ನ ಝಪೊರಿಝಿಯಾ ಪ್ರದೇಶದಿಂದ ಗಡಿಗೆ ಏಕಾಂಗಿಯಾಗಿ ಪ್ರಯಾಣಿಸಿದ ನಂತರ ಬಾಲಕ ಸ್ಲೋವಾಕಿಯಾವನ್ನು ಪ್ರವೇಶಿಸಿದ್ದಾನೆ ಎನ್ನಲಾಗಿದೆ.
ಫೇಸ್ಬುಕ್ನಲ್ಲಿ ಸ್ಲೋವಾಕಿಯಾದ ಪೊಲೀಸ್ ಪಡೆಯು ಬೆನ್ನಿಗೆ ಬ್ಯಾಗ್ ಧರಿಸಿ ಕೈಯಲ್ಲಿ ಮೊಬೈಲ್ ಸಂಖ್ಯೆಯನ್ನು ಬರೆದುಕೊಂಡ ಬಾಲಕನ ಫೋಟೋವನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿದೆ.
ಸ್ಲೋವಾಕಿಯಾಕ್ಕೆ ತೆರಳಿದ ನಂತರ ಸ್ವಯಂಸೇವಕರು ಈ ಬಾಲಕನನ್ನು ನೋಡಿಕೊಂಡಿದ್ದಾರೆ ಎಂದು ಫೇಸ್ಬುಕ್ ಪೋಸ್ಟ್ನಲ್ಲಿ ಮಾಹಿತಿ ನೀಡಲಾಗಿದೆ. ಬಾಲಕನಿಗೆ ಆಹಾರ ಹಾಗೂ ಪಾನೀಯಗಳನ್ನು ನೀಡಲಾಗಿದೆ.
ಕೇವಲ 11 ವರ್ಷದ ಬಾಲಕ ಏಕಾಂಗಿಯಾಗಿ ಜಪೊರೊಝೈನಿಂದ ಉಕ್ರೇನ್ನ ಗಡಿಯುದ್ದಕ್ಕೂ ಸ್ಲೋವಾಕಿಯಾಗೆ ಬಂದನು. ಪಾಸ್ಪೋರ್ಟ್ ಹಾಗೂ ಫೋನ್ ಸಂಖ್ಯೆಯನ್ನು ಆತನ ಕೈ ಮೇಲೆ ಬರೆಯಲಾಗಿತ್ತು . ಆತನ ಬಳಿ ಒಂದು ಬ್ಯಾಗ್ ಮಾತ್ರವಿತ್ತು. ಆತ ತನ್ನ ನಗು, ಧೈರ್ಯ ಹಾಗೂ ಶ್ರದ್ಧೆಯ ಮೂಲಕ ನಮ್ಮ ಮನಸ್ಸನ್ನು ಗೆದ್ದಿದ್ದಾನೆ ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.