alex Certify ಏಕಕಾಲದಲ್ಲಿ ಎರಡು ಕಡೆ ಕೆಲಸ ಮಾಡಿ ವೇತನ ಪಡೆಯುತ್ತಿದ್ದವರಿಗೆ ಬಿಗ್ ಶಾಕ್; ಕ್ರಮ ಕೈಗೊಳ್ಳಲು ಮುಂದಾದ ಐಟಿ ಕಂಪನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಕಾಲದಲ್ಲಿ ಎರಡು ಕಡೆ ಕೆಲಸ ಮಾಡಿ ವೇತನ ಪಡೆಯುತ್ತಿದ್ದವರಿಗೆ ಬಿಗ್ ಶಾಕ್; ಕ್ರಮ ಕೈಗೊಳ್ಳಲು ಮುಂದಾದ ಐಟಿ ಕಂಪನಿಗಳು

ಕೊರೊನಾ ಸಂದರ್ಭದಲ್ಲಿ ಲಾಕ್ ಡೌನ್ ಕಾರಣಕ್ಕೆ ಬಹುತೇಕ ಎಲ್ಲ ಕ್ಷೇತ್ರಗಳು ತತ್ತರಿಸಿ ಹೋಗಿದ್ದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಮಾತ್ರ ಇನ್ನಷ್ಟು ಉತ್ತುಂಗಕ್ಕೆ ಏರಿತ್ತು. ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದ ಕಾರಣ ಕಂಪನಿಗಳಿಗೂ ಸಾಕಷ್ಟು ಹಣ ಉಳಿತಾಯವಾಗುತ್ತಿತ್ತು.

ಆದರೆ ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಕೆಲವರು, ಏಕಕಾಲದಲ್ಲಿ ಎರಡು ಕಂಪನಿಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ವೇತನವನ್ನೂ ಡಬಲ್ ಮಾಡಿಕೊಂಡಿದ್ದರು. ಇಂತಹ ವಿಧಾನಕ್ಕೆ ‘ಮೂನ್ ಲೈಟಿಂಗ್’ ಎಂಬ ಹೆಸರಿದೆ. ಇದೀಗ ಇದರಿಂದ ತಮ್ಮ ಕಾರ್ಯ ಕ್ಷಮತೆಗೆ ಹಿನ್ನಡೆಯಾಗುತ್ತಿದೆ ಎಂಬ ಕಾರಣಕ್ಕೆ ಐಟಿ ಕಂಪನಿಗಳು ಇಂಥವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿವೆ.

‘ಮೂನ್ ಲೈಟಿಂಗ್’ ಅವಕಾಶವನ್ನು ಬೆರಳೆಣಿಕೆಯಷ್ಟು ಕಂಪನಿಗಳು ಮಾತ್ರ ನೀಡುತ್ತಿದ್ದು, ಆದರೆ ಭಾರತದಲ್ಲಿ ಸ್ವಿಗ್ಗಿ ಸೇರಿದಂತೆ ಕೆಲವೊಂದು ಕಂಪನಿಗಳನ್ನು ಹೊರತುಪಡಿಸಿ ಬಹುತೇಕ ಕಂಪನಿಗಳು ಅವಕಾಶ ನೀಡುವುದಿಲ್ಲ. ಇದೀಗ ವಿಪ್ರೊ ಎರಡೆರಡು ಕಡೆ ಕೆಲಸ ಮಾಡುವ ಪದ್ಧತಿಗೆ ಕಡಿವಾಣ ಹಾಕಲು ಮುಂದಾಗಿದ್ದು, ಈಗ ಇನ್ಫೋಸಿಸ್ ಕೂಡ ಅದೇ ಮಾರ್ಗ ಅನುಸರಿಸಿದೆ.

‘ಮೂನ್ ಲೈಟಿಂಗ್’ ವಿರುದ್ಧ ಉದ್ಯೋಗಿಗಳಿಗೆ ಇನ್ಫೋಸಿಸ್ ಕಠಿಣ ಎಚ್ಚರಿಕೆ ನೀಡಿದ್ದು, ಕಂಪನಿಯ ನಿಯಮದ ಪ್ರಕಾರ ಇದಕ್ಕೆ ಅವಕಾಶವಿರುವುದಿಲ್ಲ. ಇದನ್ನು ಉಲ್ಲಂಘಿಸುವ ಉದ್ಯೋಗಿಗಳಿಗೆ ವಜಾ ಸೇರಿದಂತೆ ಇತರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ. ಈ ಕುರಿತಂತೆ ತನ್ನ ಎಲ್ಲಾ ಉದ್ಯೋಗಿಗಳಿಗೆ ಇ ಮೇಲ್ ಸಂದೇಶ ರವಾನಿಸಿದೆ ಎಂದು ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...