alex Certify ಎ‌ಚ್ಚರ…! ರಾಂಗ್​ ಸೈಡ್​ ಡ್ರೈವಿಂಗ್​ ಮಾಡಿದ್ರೆ ವಾಹನ ಸೀಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎ‌ಚ್ಚರ…! ರಾಂಗ್​ ಸೈಡ್​ ಡ್ರೈವಿಂಗ್​ ಮಾಡಿದ್ರೆ ವಾಹನ ಸೀಜ್

ರಾಂಗ್​ ಸೈಡ್​ ಡ್ರೈವಿಂಗ್‌ ​ನಿಂದ ಉಂಟಾಗುವ ಅವಘಡಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿರುವ ಮುಂಬೈ ಪೊಲೀಸರು ರಾಂಗ್​ ಸೈಡ್​​ನಲ್ಲಿ ವಾಹನ ಚಲಾಯಿಸುವ ವಾಹನ ಚಾಲಕರ ವಾಹನವನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಮುಂಬೈನ ನೂತನ ಪೊಲೀಸ್​ ಕಮಿಷನರ್​ ಆಗಿ ಸಂಜಯ್​ ಪಾಂಡೆ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಉಂಟಾಗಿದೆ. ಮಾರ್ಚ್​ 7ರಂದು ರಾಂಗ್​ ಸೈಡ್​ ಡ್ರೈವಿಂಗ್​ ವಿರುದ್ಧ ವಿಶೇಷ ಅಭಿಯಾನವನ್ನೂ ನಡೆಸಲಾಗಿದೆ.

ಮಾರ್ಚ್​ 31ರವರೆಗೆ ಮುಂಬೈ ಪೊಲೀಸರು ರಾಂಗ್​​ ಸೈಡ್​​ನಲ್ಲಿ ವಾಹನ ಚಾಲನೆ ಮಾಡಿದ ವಾಹನ ಚಾಲಕರ ವಿರುದ್ಧ 2649 ಎಫ್​ಐಆರ್​ಗಳನ್ನು ದಾಖಲಿಸಿದ್ದಾರೆ. ಪೊಲೀಸ್​ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಪ್ರತಿದಿನ ಸರಾಸರಿ 200 ಎಫ್​ಐಆರ್​ಗಳು ಇದೇ ವಿಚಾರವಾಗಿ ದಾಖಲಾಗುತ್ತಿದೆ.

ಪ್ರಸ್ತುತ ಈ ರೀತಿಯ ತಪ್ಪುಗಳನ್ನು ಎಸಗಿದವರ ವಿರುದ್ಧ ಭಾರತೀಯ ದಂಡ ಸಂಹಿತೆ 279 ಹಾಗೂ 336 ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ.

ಆದರೆ ಈ ಎಫ್​ಐಆರ್ ​ಗಳಿಗೆ ಕ್ಯಾರೇ ಎನ್ನದೇ ರಾಂಗ್​ ಸೈಡ್​​ನಲ್ಲಿ ಡ್ರೈವಿಂಗ್​ ಮುಂದುವರಿಸುವವರಿಗೆ ಎಚ್ಚರಿಕೆ ಎಂಬಂತೆ ಮುಂಬೈ ಪೊಲೀಸ್​ ಕಮಿಷನರ್​ ಸಂಜಯ್​ ಪಾಂಡೆ ಟ್ವೀಟ್​ ಮಾಡಿದ್ದು, ಇಂತಹ ಅಪರಾಧಗಳು ಕಡಿಮೆಯಾಗದೇ ಇದ್ದರೆ ವಾಹನಗಳನ್ನು ಜಫ್ತಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...