ಭಾರತದ ಮಾರುಕಟ್ಟೆಗೆ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಪರಿಚಯಿಸುವ ಮೂಲಕ ಬಿರುಗಾಳಿ ಎಬ್ಬಿಸಿದ್ದ ಓಲಾ ಎಲೆಕ್ಟ್ರಿಕ್, ತನ್ನ ಎಸ್ 1 ಇ ಸ್ಕೂಟರ್ ಅನ್ನು ರೀ ಲಾಂಚ್ ಮಾಡಿದೆ.
ಇದರ ಪರಿಚಯಾತ್ಮಕ ಬೆಲೆ 99,999 ರೂಪಾಯಿಗಳಾಗಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 90 ಕಿಲೋ ಮೀಟರ್ ನಿಂದ 128 ಕಿಲೋಮೀಟರ್ ವರೆಗೆ ಪ್ರಯಾಣಿಸಬಹುದು ಎಂದು ಕಂಪನಿ ತಿಳಿಸಿದೆ.
ಓಲಾ ಎಸ್ 1 ಹೊಸ ಸ್ಕೂಟರ್ 3 ಕೆ ಡಬ್ಲ್ಯೂ ಎಚ್ ಲೀಥಿಯಂ ಅಯಾನ್ ಬ್ಯಾಟರಿಯನ್ನು ಹೊಂದಿದ್ದು, ಹೀಗಾಗಿ ಹೆಚ್ಚು ಮೈಲೇಜ್ ನೀಡುವ ಕ್ಷಮತೆಯನ್ನು ಹೊಂದಿದೆ.