ಹೈದರಾಬಾದ್: ಎಸ್ಕಲೇಟರ್ ಬಳಸುವಾಗ ಬಹಳ ಜಾಗರೂಕತೆಯಿಂದ ಇರಬೇಕು. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕುತ್ತು ಗ್ಯಾರಂಟಿ. ಎಸ್ಕಲೇಟರ್ ನಿಂದ ಮಿಸ್ ಆಗಿ ಬಿದ್ದು ಎಷ್ಟೋ ಜನ ಸಾವನ್ನಪ್ಪಿದ್ದರೆ, ಮತ್ತೊಂದಿಷ್ಟು ಜನ ಗಾಯಗೊಂಡಿರೋದನ್ನೂ ಕೇಳಿದ್ದೇವೆ. ಅನೇಕರು ಈಗಲೂ ಎಸ್ಕಲೇಟರ್ ಬಳಸೋದಕ್ಕೆ ಹಿಂದೆ ಮುಂದೆ ನೋಡೋದು ಇದೇ ಕಾರಣಕ್ಕೆ. ಇದೀಗ ಮೆಟ್ರೋದಲ್ಲಿ ಎಸ್ಕಲೇಟರ್ ನಿಂದ ಪ್ರಯಾಣಿಕರೊಬ್ಬರು ಗಾಯಗೊಂಡಿದ್ದಾರೆ.
ಹೈದರಾಬಾದಿನ ಹೈಟೆಕ್ ಸಿಟಿ ಮೆಟ್ರೋ ನಿಲ್ದಾಣದಲ್ಲಿ ಇಂಥಹದ್ದೇ ಘಟನೆಯೊಂದು ನಡೆಸಿದೆ. ಎಸ್ಕಲೇಟರ್ ಮೂಲಕ ಕೆಳಗೆ ಬರುತ್ತಿರುವ ವೇಳೆ ಮಹಿಳಾ ಪ್ರಯಾಣಿಕರೊಬ್ಬರ ಬಲ ಕಾಲು ಮೆಟ್ರೋ ರೈಲು ನಿಲ್ದಾಣದಲ್ಲಿ ಇದ್ದ ಎಸ್ಕಲೇಟರ್ ಗೆ ಸಿಲುಕಿಕೊಂಡಿದೆ. ಸಿಕ್ಕಾಕಿಕೊಂಡ ಪರಿಣಾಮ ಕಾಲು ಹೊರ ತೆಗೆಯಲು ಆಗಿಲ್ಲ. ಈ ವೇಳೆ ಆ ಮಹಿಳೆಗೆ ಗಾಯವಾಗಿದೆ. ರಕ್ತಸ್ರಾವ ಆಗ್ತಾ ಇದ್ದಂತೆ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ಇನ್ನು ಈ ಜಾಗದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸಹ ಇರಲಿಲ್ಲ. ಈ ಮಹಿಳೆಯನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಡದೇ ಇರೋದು ಸಿಬ್ಬಂದಿಯ ನಿರ್ಲಕ್ಷ್ಯವೇ ಸರಿ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ನಿರ್ಲಕ್ಷ್ಯ ವಹಿಸಿದ ಮೆಟ್ರೋ ಸಿಬ್ಬಂದಿ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://www.facebook.com/photo.php?fbid=3418548525098305&set=a.1623265141293328&type=3