
ಮಾರ್ಚ್ ತಿಂಗಳಿನಲ್ಲೇ ಬಿರು ಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದಾರೆ. ಇನ್ನು ಏಪ್ರಿಲ್, ಮೇನಲ್ಲಿ ತಾಪಮಾನ ಮತ್ತಷ್ಟು ಹೆಚ್ಚಲಿದೆ. ಹಾಗಾಗಿ ಮನೆಯಲ್ಲಿ ಎಸಿ, ಅಥವಾ ಕೂಲರ್ ಬೇಕೆನಿಸುತ್ತದೆ.
ಎಷ್ಟೋ ಮಂದಿ ಹೊಸ ಕೂಲರ್ ಹಾಗೂ ಎಸಿ ಖರೀದಿಸುವ ಯೋಚನೆಯಲ್ಲಿರಬಹುದು. ಆದ್ರೆ ಸದ್ಯದಲ್ಲೇ ಎಸಿ ಹಾಗೂ ಕೂಲರ್ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.
ಎಸಿ ಹಾಗೂ ಕೂಲರ್ ಮಾರಾಟದಲ್ಲಿ ಈಗಾಗ್ಲೇ ಹೆಚ್ಚಳವಾಗಿದೆ. ನೀವು 30,000 ರೂಪಾಯಿ ಮೌಲ್ಯದ ಎಸಿ ಖರೀದಿಸಬೇಕು ಎಂದುಕೊಂಡಿದ್ದರೆ ಸದ್ಯದಲ್ಲೇ ಅದರ ಬೆಲೆ 3 ಸಾವಿರ ರೂಪಾಯಿವರೆಗೂ ಹೆಚ್ಚಳವಾಗಬಹುದು.
ರಷ್ಯಾ-ಉಕ್ರೇನ್ ನಡುವೆ ಯುದ್ಧ ಆರಂಭವಾದ ನಂತರ ಎಸಿ ಹಾಗೂ ಕೂಲರ್ ಬೆಲೆ ಶೇ.5-7ರಷ್ಟು ಹೆಚ್ಚಳವಾಗಿತ್ತು. ಈಗ ಶೇ.10 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕೆಲ ದಿನಗಳಿಂದೀಚೆಗೆ ಮೆಟಲ್ ಹಾಗೂ ಪ್ಲಾಸ್ಟಿಕ್ ಕಂಪೋನೆಂಟ್ ಗಳ ಬೆಲೆ ಏರಿಕೆಯಾಗಿದೆ. ಹಾಗಾಗಿ ಎಸಿ, ಕೂಲರ್ ಸೇರಿದಂತೆ ಇನ್ನೂ ಅನೇಕ ಎಲೆಕ್ಟ್ರಿಕ್ ಉಪಕರಣಗಳು ದುಬಾರಿಯಾಗಲಿವೆ.