
ಎಸಿ ಕಂಪ್ರೆಸರ್ ಸ್ಫೋಟಗೊಂಡ ಪರಿಣಾಮ 49 ವರ್ಷದ ವ್ಯಕ್ತಿಯು ಸಾವನ್ನಪ್ಪಿದ ಘಟನೆಯು ಹರಿಯಾಣದ ಗುರ್ಗಾಂವ್ ಪಟೌಡಿ ಚೌಕ್ ಬಳಿಯ ಮನೋಹರ್ ನಗರದಲ್ಲಿ ನಡೆದಿದೆ.
ವ್ಯಕ್ತಿಗೆ ನೂರು ಪ್ರತಿಶತ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸಲಾಯ್ತಾದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೊಳೆಯುವ ಹಲ್ಲಿಗೆ ಇಲ್ಲಿದೆ ʼಮನೆ ಮದ್ದುʼ
ಎರಡು ಅಗ್ನಿಶಾಮಕ ವಾಹನಗಳು ರಕ್ಷಣಾ ಕಾರ್ಯಾಚರಣೆ ಧಾವಿಸಿದ್ದು ಶಾರ್ಟ್ ಸರ್ಕ್ಯೂಟ್ನಿಂದ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ಮೃತ ವ್ಯಕ್ತಿಯನ್ನು ಸಂಜಯ್ ಹಸೀಜಾ ಎಂದು ಗುರುತಿಸಲಾಗಿದ್ದು ಈತ ರೆಫ್ರಿಜರೇಟರ್ ಹಾಗೂ ಏಸಿ ರಿಪೇರಿ ಮಾಡುತ್ತಿದ್ದ ಎನ್ನಲಾಗಿದೆ. ಘಟನೆ ನಡೆಯುವ ಸಮಯದಲ್ಲಿ ಸಂಜಯ್ ಪತ್ನಿ ಹಾಗೂ ಇಬ್ಬರು ಮಕ್ಕಳು ಮನೆಯಲ್ಲಿ ಇರಲಿಲ್ಲ.
ಮನೆಯಿಂದ ಹೊಗೆ ಬರುವುತ್ತಿರುವುದನ್ನು ನೆರೆ ಹೊರೆಯವರು ಗಮನಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ನೆರೆಮನೆಯವರು ಅಗ್ನಿಶಾಮಕದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.