ಬೇಕಾಗುವ ಸಾಮಾಗ್ರಿಗಳು: ಎಳ್ಳು-1 ಕಪ್, ಬೆಲ್ಲ- 3/4 ಕಪ್, ಹಾಲು- 2 ಕಪ್
ಮಾಡುವ ವಿಧಾನ: ಮೊದಲಿಗೆ ಒಂದು ಬಾಣಲೆಯಲ್ಲಿ ಎಳ್ಳನ್ನು ಚೆನ್ನಾಗಿ ಹುರಿಯಿರಿ. ಬಳಿಕ ಪ್ಲೇಟ್ ಗೆ ವರ್ಗಾಯಿಸಿ, ಇದು ತಣ್ಣಗಾದ ಕೂಡಲೇ ಮಿಕ್ಸಿ ಜಾರಿಗೆ ಹಾಕಿ. ಜೊತೆಗೆ ಬೆಲ್ಲ ಹಾಗೂ ಹಾಲು ಹಾಕಿ ರುಬ್ಬಿಕೊಳ್ಳಿ. ಎಳ್ಳು ಜ್ಯೂಸ್ ದಪ್ಪ ಇದ್ದರೆ ಹಾಲು ಹಾಕಿ ಮಿಕ್ಸ್ ಮಾಡಿಕೊಂಡರೆ ರುಚಿಕರವಾದ ಎಳ್ಳು ಜ್ಯೂಸ್ ಸವಿಯಲು ಸಿದ್ಧ.