ಕನಸು ಬೀಳೋದು ಸ್ವಾಭಾವಿಕ. ಕನಸು ಬಿದ್ದು ಎಚ್ಚರವಾದ್ರೆ ತಕ್ಷಣ ನಿದ್ರೆ ಮಾಡಬೇಕು. ಹಾಗೆ ಮಾಡಿದ್ರೆ ಸ್ವಪ್ನ ಮನಸ್ಸಿನಲ್ಲುಳಿಯುವುದಿಲ್ಲ ಎಂದು ಅಗ್ನಿ ಪುರಾಣದಲ್ಲಿ ಹೇಳಲಾಗಿದೆ. ಕೆಲವೊಮ್ಮೆ ಕೆಟ್ಟ ಕನಸು ಬೀಳುತ್ತದೆ. ಇದು ನಮ್ಮನ್ನು ಭಯಗೊಳಿಸುತ್ತದೆ. ಈ ಭಯದಿಂದ ಹೊರಬರಲು, ದುಃಸ್ವಪ್ನ ಕಾಣದಂತೆ ಮಾಡಲು ಅಗ್ನಿಪುರಾಣದಲ್ಲಿ ಉಪಾಯವನ್ನು ಹೇಳಲಾಗಿದೆ.
ಎಳ್ಳು ಹಾಕಿದ ಹೊಗೆ ಮನೆಯೊಳಗಿದ್ದರೆ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡುವುದಿಲ್ಲ. ನಿಯಮಿತ ರೂಪದಲ್ಲಿ ಎಳ್ಳಿನ ಹೊಗೆ ಹಾಕುವುದರಿಂದ ದುಃಸ್ವಪ್ನ ದೂರವಾಗುತ್ತದೆ.
ಭಯ ಹುಟ್ಟಿಸುವ ಸ್ವಪ್ನವನ್ನು ಗುಪ್ತವಾಗಿಡಿ. ಶಾಸ್ತ್ರದ ಪ್ರಕಾರ ಕೆಲವೊಂದು ವಿಷಯಗಳನ್ನು ಮುಚ್ಚಿಡುವುದು ಒಳ್ಳೆಯದು. ಹಾಗೆ ಕೆಟ್ಟ ಕನಸನ್ನು ಬೇರೆಯವರಿಗೆ ಹೇಳದೆ ಅದನ್ನು ಮರೆಯಬೇಕು.
ಭಗವಂತ ಶಿವನನ್ನು ಮಹಾಕಾಲ ಎಂದು ಕರೆಯುತ್ತಾರೆ. ಪ್ರತಿದಿನ ಶಿವನ ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ನೀರನ್ನು ಅರ್ಪಿಸಿ. ಪಂಚಾಕ್ಷರಿ ಮಂತ್ರವನ್ನು ಜಪಿಸಿ. ಮೃತ್ಯುಂಜಯ ಮಂತ್ರವನ್ನು ಜಪಿಸುವುದರಿಂದಲೂ ದುಃಸ್ವಪ್ನದಿಂದ ಮುಕ್ತಿ ಪಡೆಯಬಹುದು.