ಎಳನೀರು ಬೇಸಿಗೆಯಲ್ಲಿ ಅಮೃತವಿದ್ದಂತೆ. ಬೇರೆ ಋತುಗಳಲ್ಲಿಯೂ ಎಳನೀರನ್ನು ಸೇವನೆ ಮಾಡಬಹುದು. ದೇಹವನ್ನು ಹೈಡ್ರೇಟ್ ಆಗಿಡುವ ಎಳನೀರಿನಲ್ಲಿ ಅನೇಕ ಪೋಷಕಾಂಶಗಳಿವೆ. ಇದರ ರುಚಿ ಕೂಡ ನಮ್ಮನ್ನು ಆಕರ್ಷಿಸುತ್ತದೆ.
ಹೆಚ್ಚಿನ ಜನರು ಎಳನೀರು ಕುಡಿದು ಅದರಲ್ಲಿರುವ ಗಂಜಿಯನ್ನು ಬಿಸಾಡಿಬಿಡುತ್ತಾರೆ. ಭಾರತದ ಪ್ರಸಿದ್ಧ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಅವರ ಪ್ರಕಾರ ಎಳನೀರಿನ ಗಂಜಿಯಲ್ಲಿ ಅನೇಕ ರೀತಿಯ ಆರೋಗ್ಯಕರ ಅಂಶಗಳಿರುತ್ತವೆ. ಹಾಗಾಗಿ ಅಪ್ಪಿತಪ್ಪಿಯೂ ಈ ಕೆನೆಯನ್ನು ಬಿಸಾಡಬೇಡಿ, ಎಳನೀರಿನ ಜೊತೆಗೆ ಅದನ್ನೂ ಸೇವನೆ ಮಾಡಿ ಎನ್ನುತ್ತಾರೆ ಅವರು.
ತೂಕ ನಷ್ಟಕ್ಕೆ ಪರಿಣಾಮಕಾರಿ: ಎಳನೀರಿನ ಗಂಜಿಯನ್ನು ತಿನ್ನುವುದರಿಂದ ಕ್ಯಾಲೋರಿ ಹೆಚ್ಚಾಗುತ್ತದೆ ಎಂದು ಅನೇಕ ಜನರು ಭಾವಿಸಿದ್ದಾರೆ. ಬೊಜ್ಜು ಬರುತ್ತದೆ ಎಂದು ಹೆದರುತ್ತಾರೆ. ಆದ್ರೆ ಈ ಭಾವನೆ ತಪ್ಪು, ಸೀಮಿತ ಪ್ರಮಾಣದಲ್ಲಿ ಎಳನೀರು ಗಂಜಿಯನ್ನು ಸೇವಿಸುತ್ತ ಬಂದರೆ ನಿಮ್ಮ ಹೊಟ್ಟೆ ಮತ್ತು ಸೊಂಟದ ಕೊಬ್ಬು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ.
ಜೀರ್ಣಕ್ರಿಯೆಗೆ ಸಹಾಯಕ: ಜೀರ್ಣಕ್ರಿಯೆಯ ಸಮಸ್ಯೆ ಇರುವವರು ಎಳನೀರಿನ ಗಂಜಿಯನ್ನು ಸೇವನೆ ಮಾಡಬೇಕು. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಸೂಪರ್‌ಫುಡ್‌ನಂತೆ. ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ಕರುಳನ್ನು ಆರೋಗ್ಯಕರವಾಗಿಸುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಳ: ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಎಳನೀರು ಗಂಜಿ ಪರಿಣಾಮಕಾರಿಯಾಗಿದೆ. ಅದರಲ್ಲಿ ಉತ್ಕರ್ಷಣ ನಿರೋಧಕಗಳ ಉಪಸ್ಥಿತಿಯಿರುವುದರಿಂದ ಇಮ್ಯೂನಿಟಿ ಹೆಚ್ಚಾಗುತ್ತದೆ.
ಮುಖದಲ್ಲಿ ಹೊಳಪು: ಬೇಸಿಗೆ ಮತ್ತು ಆರ್ದ್ರತೆಯ ತಾಪಮಾನದಲ್ಲಿ, ನಮ್ಮ ಮುಖದ ಚರ್ಮವು ಹವಾಮಾನದಿಂದ ಕಪ್ಪಾಗಿ ಹೋಗುತ್ತದೆ. ಎಳನೀರಿನ ಕೆನೆ ತಿಂದರೆ ಮುಖದಲ್ಲಿ ಅದ್ಭುತವಾದ ಹೊಳಪು ಬರುತ್ತದೆ. ಚರ್ಮಕ್ಕೆ ಪ್ರಾಯ ಬರುತ್ತದೆ.
ತ್ವರಿತ ಶಕ್ತಿಯ ಮೂಲ: ಬೇಸಿಗೆಯ ಋತುವಿನಲ್ಲಿ, ಸುಡುವ ಬಿಸಿಲು, ತೇವಾಂಶ ಮತ್ತು ಬೆವರಿನಿಂದ ದಣಿವಾಗುವುದು ಸಹಜ. ಎಳನೀರು ಮತ್ತು ಎಳನೀರಿನಲ್ಲಿರುವ ಗಂಜಿ ಸೇವನೆ ಮಾಡುವುದರಿಂದ ದೇಹದಲ್ಲಿ ಶಕ್ತಿಯ ಪರಿಚಲನೆಯು ವೇಗವಾಗಿರುತ್ತದೆ. ನೀವು ಉಲ್ಲಾಸವನ್ನು ಅನುಭವಿಸಲು ಪ್ರಾರಂಭಿಸುತ್ತೀರಿ.