ವ್ಯಕ್ತಿಯ ಜಾತಕದಲ್ಲಿ ದೋಷವಿದ್ದರೆ ಅದೃಷ್ಟ ಕೈ ಹಿಡಿಯುವುದಿಲ್ಲ, ಸದಾ ಸಮಸ್ಯೆ ಕಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕದ ದೋಷ ನಿವಾರಣೆಗೆ ಅದ್ಭುತ ಉಪಾಯಗಳನ್ನು ಹೇಳಲಾಗಿದೆ. ಈ ಉಪಾಯವನ್ನು ನಿಯಮಿತ ರೂಪದಲ್ಲಿ ಪಾಲನೆ ಮಾಡುವುದ್ರಿಂದ ಭಗವಂತನ ಕೃಪೆಗೆ ಪಾತ್ರರಾಗುವ ಜೊತೆಗೆ ಜಾತಕ ದೋಷ ನಿವಾರಣೆಯಾಗಿ ಅದೃಷ್ಟ ಒಲಿದುಬರುತ್ತದೆ.
ಶಾಸ್ತ್ರಗಳ ಪ್ರಕಾರ ಭಯವನ್ನು ದೂರ ಮಾಡಲು ಹನುಮಂತನ ಮುಂದೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು. ಹನುಮಾಷ್ಠಕವನ್ನು ಪಠಿಸಿ. ಕೆಂಪು ಬತ್ತಿಯನ್ನು ದೀಪಕ್ಕೆ ಬಳಸಿ.ಈ ಉಪಾಯವನ್ನು ಪ್ರತಿದಿನ ಮಾಡಬೇಕು.
ಪತಿ-ಪತ್ನಿ ಮಧ್ಯೆ ಹೊಂದಾಣಿಕೆ ಕೊರತೆ ಕಂಡಲ್ಲಿ ಭಗವಂತ ಶಿವ-ಪಾರ್ವತಿ ಅಥವಾ ವಿಷ್ಣು-ಲಕ್ಷ್ಮಿ ಮುಂದೆ ತುಪ್ಪದ ದೀಪವನ್ನು ಹಚ್ಚಿ.
ಕಷ್ಟಪಟ್ಟರೂ ಫಲ ಸಿಗಲಿಲ್ಲವೆಂದಾದ್ರೆ ಪ್ರತಿ ದಿನ ಸಂಜೆ ಲಕ್ಷ್ಮಿ ಮುಂದೆ ತುಪ್ಪದ ದೀಪ ಹಚ್ಚಿ. ಜೊತೆಗೆ ಕೆಂಪು ಬತ್ತಿಯನ್ನು ದೀಪಕ್ಕೆ ಬಳಸಿ. ದೀಪ ಮಣ್ಣಿನಿಂದ ಮಾಡಿರಬೇಕು.
ಉದ್ಯೋಗದಲ್ಲಿ ಯಶಸ್ಸು ಸಿಗಬೇಕೆನ್ನುವವರು ಲಕ್ಷ್ಮಿ-ವಿಷ್ಣುವಿನ ಮುಂದೆ ಕೆಂಪು ಬತ್ತಿ ಬಳಸಿ ತುಪ್ಪದ ದೀಪ ಹಚ್ಚಿ. ದೀಪಕ್ಕೆ ಅರಿಶಿನ-ಕುಂಕುಮ ಹಾಗೂ ಅಕ್ಕಿಯನ್ನು ಹಾಕಿ.
ಮನೆಯಲ್ಲಿ ರೋಗಿಗಳಿದ್ದರೆ ಮನೆ ಹೊರಗೆ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಸಾಸಿವೆ ಎಣ್ಣೆಯ ದೀಪ ಹಚ್ಚಿ. ಜೊತೆಗೆ ವೈದ್ಯರು ನೀಡಿದ ಔಷಧಿಯನ್ನು ಬಳಸಿ.
ಗಣೇಶನ ಕೃಪೆಗೆ ಪಾತ್ರರಾಗ ಬಯಸುವವರು ನಾಲ್ಕು ಮುಖವಿರುವ ದೀಪವನ್ನು ಬಳಸಿ.
ಹನುಮಂತನ ಕೃಪೆಗೆ ಪಾತ್ರರಾಗಲು ಮಲ್ಲಿಗೆ ದೀಪದ ಎಣ್ಣೆಯನ್ನು ಬಳಸಬೇಕು.
ಆರ್ಥಿಕ ವೃದ್ಧಿಗೆ ಬೆಳಿಗ್ಗೆ ಹಾಗೂ ಸಂಜೆ ಮನೆಯ ಬಾಗಿಲ ಬಳಿ ತುಪ್ಪದ ದೀಪವನ್ನು ಹಚ್ಚಿ.