ಅಡುಗೆ ಮನೆಯಲ್ಲಿರುವ ಸಿಂಕ್ ಪದೇ ಪದೇ ಕಟ್ಟುತ್ತಿದೆಯೇ, ಅದನ್ನು ಬಿಚ್ಚಿ ಕಸ ತೆಗೆದು ಬೇಸತ್ತಿದ್ದೀರಾ…? ಯಾವ ವಸ್ತುಗಳನ್ನು ಸಿಂಕ್ ಗೆ ಹಾಕುವುದರಿಂದ ಹೀಗೆ ನೀರು ಕಟ್ಟುತ್ತದೆ ಗೊತ್ತೇ…?
ಚಿಕನ್, ಮೊಟ್ಟೆ, ತರಕಾರಿ ಮೊದಲಾದ ಪದಾರ್ಥಗಳನ್ನು ಸಿಂಕ್ ಗೆ ಚೆಲ್ಲುವುದರಿಂದ ಅದು ಪೂರ್ತಿಯಾಗಿ ಸ್ವಚ್ಛವಾಗದೆ ಉಳಿಯುತ್ತದೆ. ಅದನ್ನು ಸೂಕ್ತವಾಗಿ ವಿಂಗಡಣೆ ಮಾಡದ ಹೊರತು ಸುತ್ತಮುತ್ತಲಿನ ಪರಿಸರವೂ ಕಲುಷಿತಗೊಳ್ಳುತ್ತದೆ.
ಇದನ್ನು ತೆಗೆದು ಸ್ವಚ್ಛವಾಗಿಸುವ ಕ್ಲೀನರ್ ಗಳಲ್ಲಿ ಬ್ಲೀಚ್ ನಂತಹ ರಾಸಾಯನಿಕ ಗುಣಗಳಿರುತ್ತವೆ. ಇವು ನೀರಿನೊಂದಿಗೆ ಸೇರಿ ನದಿ ಸಮುದ್ರ ಸೇರಿದರೆ ಅಲ್ಲಿರುವ ಜೀವಿಗಳು ನಾಶವಾಗುತ್ತವೆ. ಲೇಬಲ್ ಗಳನ್ನು ಓದದೆ ಕ್ಲೀನರ್ ಗಳನ್ನು ಬಳಸದಿರಿ. ನೀರಿನಲ್ಲಿ ಕರಗುವ ನೈಸರ್ಗಿಕ ಉತ್ಪನ್ನವನ್ನೇ ಬಳಸಿ.
ಅವಧಿ ಮೀರಿದ ಅನಗತ್ಯ ಔಷಧಿಗಳನ್ನು ನೀರಿನ ಸಿಂಕ್ ನಲ್ಲಿ ಬಿಡಬೇಡಿ. ಅವು ಜಲಜೀವಿಗಳ ಪ್ರಾಣಕ್ಕೇ ಮಾರಕವಾಗಬಹುದು. ಅದನ್ನು ಸಾಧ್ಯವಾದಷ್ಟು ಕಸದ ವಿಂಗಡಣೆಯ ಡಬ್ಬಿಗೆ ಹಾಕಿ. ಅದಕ್ಕೂ ಮುನ್ನ ನಿಮ್ಮ ಹೆಸರು ಮತ್ತು ಪ್ರಿಸ್ಕ್ರಿಪ್ಷನ್ ತೆಗೆಯಲು ಮರೆಯದಿರಿ.