ಮಾತು ಬಾರದ, ದನಿಯನ್ನು ಆಲಿಸಲು ಸಾಧ್ಯವಾಗದ ದಂಪತಿ ನಾಸಿಕ್‌ನಲ್ಲಿ ಪಾನಿಪುರಿ ಸ್ಟಾಲ್ ನಡೆಸುತ್ತಿದ್ದು, ಅವರ ಪ್ರಕಾಶಮಾನ ನಗು ಈಗ ಸಾಮಾಜಿಕ ಜಾಲತಾಣವನ್ನು ಬೆಳಗಿಸಿದೆ.
ಇನ್‌ಸ್ಟಾಗ್ರಾಮ್ ಫುಡ್ ವ್ಲೋಗರ್ ‘ಸ್ಟ್ರೀಟ್ ಫುಡ್ ರೆಸಿಪಿಸ್’ ಹಂಚಿಕೊಂಡ ವೀಡಿಯೊದಲ್ಲಿ, ದಂಪತಿ ವ್ಯಾಪಾರವನ್ನು ಹೇಗೆ ನಡೆಸುತ್ತಾರೆ ಎಂಬುದನ್ನು ಹಂಚಿಕೊಳ್ಳುವುದನ್ನು ಕಾಣಬಹುದು.
ಇಬ್ಬರು ತಮ್ಮ ದೈಹಿಕ ನ್ಯೂನತೆ ಹೊಂದಿರುವುದು ಮತ್ತು ಅವರು ಹೇಗೆ ಒಟ್ಟಿಗೆ ಕೆಲಸ ಮಾಡುತ್ತಾರೆ ಎಂಬುದನ್ನು ಅವರು ಕೈ ಸನ್ನೆಗಳ ಮೂಲಕ ಪ್ರದರ್ಶಿಸಿದ್ದಾರೆ.
ತಮ್ಮ ಗ್ರಾಹಕರೊಂದಿಗೆ ಸರಳ ಸನ್ನೆಗಳ ಮೂಲಕ ಸಂವಹನ ನಡೆಸುತ್ತಾರೆ. ಉದಾಹರಣೆಗೆ, ಮಹಿಳೆ ಸನ್ನೆಗಳನ್ನು ಬಳಸಿ ಗ್ರಾಹಕರಿಂದ ಅಗತ್ಯವಾದ ಮಸಾಲೆ ಪ್ರಮಾಣ ದೃಢೀಕರಿಸುವುದನ್ನು ಕಾಣಬಹುದು.
ಶುದ್ಧತೆ ಮತ್ತು ಅಚ್ಚುಕಟ್ಟಿಗೆ ಒತ್ತು ನೀಡಿದ ಚಿಕ್ಕ ಸ್ಟಾಲ್‌ನಲ್ಲಿ ಅವರು ಬಡಿಸುವ ಪೂರಿ ಸೇರಿ ಪ್ರತಿಯೊಂದೂ ಪದಾರ್ಥವನ್ನು ಮನೆಯಲ್ಲಿ ತಯಾರಿಸಲ್ಪಟ್ಟಿದೆ ಎಂದು ವ್ಲೋಗರ್ ವಿವರಿಸಿದ್ದಾರೆ.
ಇಂತಹದ್ದೇ ಒಂದು ಉದಾಹರಣೆ ಎಂದರೆ ತೆಲಂಗಾಣದ 62 ವರ್ಷದ ದೃಷ್ಟಿ ವಿಕಲಚೇತನ ವ್ಯಕ್ತಿಯು ಕಳೆದ 50 ವರ್ಷಗಳಿಂದ ಕೃಷಿ ಜಮೀನುಗಳಲ್ಲಿನ ಬಾವಿಗಳಲ್ಲಿ ಕೃಷಿ ಪಂಪ್ ಸೆಟ್ ಮೋಟಾರ್‌ಗಳನ್ನು ದುರಸ್ತಿ ಮಾಡುವ ಮೂಲಕ ಸಮಾಜದ ಎಲ್ಲಾ ವರ್ಗದ ಜನರಿಗೆ ಮಾದರಿಯಾಗಿದ್ದಾರೆ.