alex Certify ಎಲ್ಲರೂ ಇಷ್ಟಪಡುವ ಹೆಲ್ದಿ ಫುಡ್ ‘ಮೆಕ್ಕೆಜೋಳ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲರೂ ಇಷ್ಟಪಡುವ ಹೆಲ್ದಿ ಫುಡ್ ‘ಮೆಕ್ಕೆಜೋಳ’

ಹೊರಗೆ ಹೋದಾಗ ಟೈಂಪಾಸಿಗೆ ಏನಾದರೂ ತಿಂಡಿ ತಿನ್ನುತ್ತೇವೆ. ಅವುಗಳಲ್ಲಿ ಮೆಕ್ಕೆಜೋಳದ ತೆನೆಯೂ ಒಂದು. ಆದರೆ ಮೆಕ್ಕೆಜೋಳದ ತೆನೆ ಬರೀ ಟೈಂಪಾಸ್ ಗಲ್ಲ. ಇದರಲ್ಲಿ ತುಂಬಾ ಆರೋಗ್ಯ ಪ್ರಯೋಜನಗಳಿವೆ. ಟೈಂಪಾಸ್ ತಿಂಡಿಗಳಲ್ಲಿ ಆರೋಗ್ಯ ರಕ್ಷಣೆಯ ಸೂತ್ರವನ್ನು ಕಂಡುಕೊಳ್ಳಿ.

* ಮೆಕ್ಕೆಜೋಳದಲ್ಲಿ ಡಯಟರಿ ಫೈಬರ್ ಎಂದರೆ ನಾರು ಸತ್ವ ತುಂಬಾ ಹೆಚ್ಚು. ಅದು ಮಲವಿಸರ್ಜನೆ ಸುಲಭವಾಗುವಂತೆ ಮಾಡುತ್ತದೆ. ಮಲಬದ್ಧತೆ ದೂರಮಾಡುತ್ತದೆ. ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸುತ್ತದೆ.

* ಒಂದು ಕಪ್ ಮೆಕ್ಕೆಜೋಳದಲ್ಲಿ 18.4 ಶೇಕಡ ನಾರು ಸತ್ವ ಇದೆಯಾದ್ದರಿಂದ ಪೈಲ್ಸ್ ತೊಂದರೆಯನ್ನು ನಿವಾರಿಸುತ್ತದೆ. ಕ್ಯಾನ್ಸರ್ ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಇರಿಟೇಬಲ್ ಬೋವಲ್ ಸಿಂಡ್ರೋಮ್ ಕಾಡದಂತೆ ನೋಡಿಕೊಳ್ಳುತ್ತದೆ.

* ಕಬ್ಬಿಣ ಸತ್ವ ಮಟ್ಟವನ್ನು ಹೆಚ್ಚಿಸಿ ರಕ್ತಹೀನತೆಯನ್ನು ತಗ್ಗಿಸುತ್ತದೆ. ಹೊಸ ರಕ್ತ ಕಣ ಹುಟ್ಟುವುದಕ್ಕೂ ಮೆಕ್ಕೆಜೋಳ ದಾರಿ ಮಾಡುತ್ತದೆ.

* ಮೆಕ್ಕೆಜೋಳದಲ್ಲಿ ಖನಿಜ ಲವಣಗಳಾದ ಪಾಸ್ಪರಸ್, ಮೆಗ್ನೀಷಿಯಂ, ಮ್ಯಾಂಗನೀಸ್, ಐರನ್, ಕಾಪರ್ ಸಾಕಷ್ಟು ಪ್ರಮಾಣದಲ್ಲಿವೆ. ಅಲ್ಲದೆ ಅಪರೂಪದ ಸೆಲೆನಿಯಮ್ ಕೂಡ ಅಧಿಕವಿದೆ. ಇದು ಪಾಸ್ಪರಸ್ ನೊಂದಿಗೆ ವರ್ತಿಸಿ ಎಲುಬುಗಳನ್ನು ಗಟ್ಟಿಗೊಳಿಸುತ್ತದೆ. ಮೆಗ್ನೀಷಿಯಂ ಎಲುಬಿನ ಆರೋಗ್ಯದೊಂದಿಗೆ ಹೃದಯವನ್ನು ಬಲಪಡಿಸುತ್ತದೆ.

* ಇದರಲ್ಲಿ ಕೆರೋಟಿನಾಯ್ಡ್, ವಿಟಮಿನ್ ಎ, ಬೀಟಾ-ಕ್ಯಾರೋಟಿನ್ ಗಳಿವೆ. ಇದು ವಯಸ್ಸಾದ ಕಾಲದಲ್ಲಿ ಕಾಣಿಸಿಕೊಳ್ಳುವ ನಾನಾ ನೋವುಗಳನ್ನು ನಿವಾರಿಸುತ್ತದೆ.

* ಮೆಕ್ಕೆಜೋಳದ ಆಂಟಿ ಆಕ್ಸಿಡೆಂಟ್ ಗಳು ಫ್ರೀ ರಾಡಿಕಲ್ಸ್ ಗಳನ್ನು ಬಲಗುಂದಿಸಿ ಹಲವು ಬಗೆಯ ಕ್ಯಾನ್ಸರ್ ಗಳು ಬಾರದಂತೆ ಕಾಯುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...