ಬೆಂಗಳೂರು: ಭಾರತೀಯ ಜೀವವಿಮಾ ನಿಗಮದ ವತಿಯಿಂದ ‘ವಿಮಾ ರತ್ನ’(Bhima Ratna 864) ಪ್ಲಾನ್ ಪರಿಚಯಿಸಲಾಗಿದೆ. ಲಿಂಕ್ ಮಾಡದ ವೈಯಕ್ತಿಕ ಉಳಿತಾಯ ಜೀವ ವಿಮಾ ಯೋಜನೆ ಇದಾಗಿದ್ದು, ಸೀಮಿತ ಪ್ರೀಮಿಯಂ ಪಾವತಿ ಖಾತರಿ ಸೇರ್ಪಡೆಯೊಂದಿಗೆ ಮನಿ ಬ್ಯಾಕ್ ಗ್ಯಾರೆಂಟಿ ಹೊಂದಿದೆ.
ಎಲ್ಐಸಿಯ ‘ವಿಮಾ ರತ್ನ’ ಪ್ಲಾನ್ 15 ವರ್ಷ, 20 ವರ್ಷ ಮತ್ತು 25 ವರ್ಷಗಳ ಅವಧಿಗೆ ಲಭ್ಯವಿದ್ದು, ಪ್ರೀಮಿಯಂ ಪಾವತಿಗೆ ಸೀಮಿತ ಕಾಲಾವಕಾಶ ಇರುತ್ತದೆ.
ವಿಮೆದಾರರು ಆಕಸ್ಮಿಕವಾಗಿ ಮೃತಪಟ್ಟ ಸಂದರ್ಭದಲ್ಲಿ ಕುಟುಂಬದವರಿಗೆ ಹೆಚ್ಚಿನ ಆರ್ಥಿಕ ನೆರವು ನೀಡಲಾಗುವುದು. ಸಾಲ ಸೌಲಭ್ಯ ಅಗತ್ಯಗಳನ್ನು ಕೂಡ ಪಡೆಯಬಹುದು.
ಯೋಜನೆಯ ಕುರಿತಾದ ಮಾಹಿತಿಗಾಗಿ ಎಲ್ಐಸಿ ಇಂಡಿಯಾ ವೆಬ್ಸೈಟ್, ಎಲ್ಐಸಿ ಕಾರ್ಪೊರೇಟ್ ಏಜೆಂಟ್, ವಿಮಾ ಮಾರ್ಕೆಟಿಂಗ್ ಸಂಸ್ಥೆಗಳನ್ನು ಸಂಪರ್ಕಿಸಬಹುದು ಎಂದು ಹೇಳಲಾಗಿದೆ.