ಬೆಂಗಳೂರು: ಕೊರೊನಾ ರೂಪಾಂತರಿ ವೈರಸ್ 4ನೇ ಅಲೆ ಬರುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಡಾ. ರಾಜು ತಮ್ಮ ಹೊಸ ವಿಡಿಯೋದಲ್ಲಿ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಕೊರೊನಾ ವೈರಸ್ ರೂಪಾಂತರಗೊಳ್ಳಬಹುದು. ಆದರೆ ಅಪಾಯಕಾರಿ ಎಂದು ಹೇಳಲು ಸಾಧ್ಯವಿಲ್ಲ. 40 ವರ್ಷಗಳ ಹಿಂದೆ ಬಂದಿದ್ದ ಮಾರಣಾಂತಿಕ ಹೆಚ್ಐವಿ ಈಗಲೂ ಇದೆ. ಆದರೂ ಈ ವೈರಸ್ ಬಗ್ಗೆ ಈಗ ತಜ್ಞರಾರೂ ಮಾತನಾಡುತ್ತಿಲ್ಲ…… ಆದರೆ ಒಂದು ಸಾಮಾನ್ಯ ಕೊರೊನಾ ವೈರಸ್ ಬಗ್ಗೆ ಅದರ ರೂಪಾಂತರ ವೈರಸ್ ಬಗ್ಗೆಯೇ ಪ್ರಸ್ತುತ ಎಲ್ಲೆಡೆ ಚರ್ಚೆ ನಡೆಯುತ್ತಿದೆ….. ಮುಂದಿನ ದಿನಗಳಲ್ಲಿ ಕೊರೊನಾ ವೈರಸ್ ಬಗ್ಗೆಯೂ ಚರ್ಚೆ ಕಡಿಯಾಗುತ್ತಾ ಹೋಗಲಿದೆ. ಹಾಗಂತ ಕೋವಿಡ್ ರೂಪಾಂತರಗೊಂಡು ನಾಲ್ಕನೇ ಅಲೆಯಾಗಿಯೂ ಹರಡುವ ಸಾಧ್ಯತೆ ಇಲ್ಲದಿಲ್ಲ ಎಂದು ಡಾ.ರಾಜು ಅಭಿಪ್ರಾಯಪಟ್ಟಿದ್ದಾರೆ.
BREAKING: ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 3 ಕ್ಕಿಂತ ಕಡಿಮೆ, 3202 ಹೊಸ ಕೇಸ್, 38 ಜನ ಸಾವು
ಯಾವುದೇ ವೈರಸ್ ರೂಪಾಂತರಗೊಳ್ಳುತ್ತಾ ಹೋದಂತೆ ವ್ಯಕ್ತಿಯಲ್ಲಿಯೂ ಪ್ರತಿಕಾಯಗಳು ಅಥವಾ ಆಂಟಿ ಬಾಡಿ ನಿರ್ಮಾಣವಾಗುತ್ತದೆ. ಇದರಿಂದ ಹೆಚ್ಚಿನ ಅಪಾಯ ಕಡಿಮೆ. ಈಗ ಮೂರನೇ ಅಲೆ ಕೊರೊನಾ ಮೊದಲೆರಡು ಅಲೆಗಿಂತ ಹೆಚ್ಚು ಅಪಾಯಕಾರಿ…… ಅದರಲ್ಲಿಯೂ ಮಕ್ಕಳಿಗೆ ಹೆಚ್ಚಿನ ಕುತ್ತು ತರುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದರು. ಈಗ ನಾಲ್ಕನೇ ಅಲೆ ಬಗ್ಗೆ ವರದಿಗಳು ಮುನ್ಸೂಚನೆ ನೀಡಿವೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಜನಸಾಮಾನ್ಯರು ಪ್ರಶ್ನೆ ಮಾಡುವ ಅಗತ್ಯವಿದೆ. ವೈರಸ್ ರೂಪಾಂತರಗೊಂಡು ಪ್ರತಿಯೊಬ್ಬರಲ್ಲಿಯೂ ಪ್ರತಿಕಾಯ ಅಥವಾ ಆಂಟಿ ಬಾಡಿ ನಿರ್ಮಾಣವಾಗಿರುವುದರಿಂದ ನಾಲ್ಕನೇ ಅಲೆ ಬಂದರೂ ಅಪಾಯ ಹೇಗೆ ಸಾಧ್ಯ ಎಂಬ ಪ್ರಶ್ನೆ ಜನರಲ್ಲಿ ಮೂಡಬೇಕು ಎಂದು ಹೇಳಿದ್ದಾರೆ.
ಸಧ್ಯ ಕೊರೊನಾ 3ನೇ ಅಲೆ ಕಡಿಮೆಯಾಗಿದೆ. ವಾತಾವರಣವೂ ತಿಳಿಯಾಗಿದೆ. ಇನ್ನೂ 3-4 ತಿಂಗಳಲ್ಲಿ ಮತ್ತೆ ನೆಗಡಿ, ಕೆಮ್ಮು, ಜ್ವರದಂತಹ ಲಕ್ಷಣಗಳು ಪ್ರಾರಂಭವಾಗುತ್ತದೆ. ಆಗ ಮತ್ತದೆ ಕೊರೊನಾ ಹೊಸ ರೂಪಾಂತರಿ ವೈರಸ್ ಆರಂಭ…… 4ನೇ ಅಲೆ ಶುರುವಾಗಿದೆ ಎಂದು ಟೆಸ್ಟಿಂಗ್ ಹೆಚ್ಚಿಸಲು ಮುಂದಾಗುತ್ತಾರೆ ಎಂದು ಡಾ. ರಾಜು ಅಭಿಪ್ರಾಯಪಟ್ಟಿದ್ದಾರೆ.
ಎಲೆಕ್ಷನ್ ಮುಗಿದ ಬಳಿಕ ನಾಲ್ಕನೇ ಅಲೆ…? ಈಗ ಚುನಾವಣೆಗಳು ಆರಂಭವಾಗಿದೆ. ಚುನಾವಣೆ, ರಾಜಕೀಯ ಚಟುವಟಿಕೆಗಳು ಆರಂಭವಾದಾಗ ತಾನಾಗಿಯೇ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತದೆ, ರಾಜಕೀಯ ಚಟುವಟಿಕೆಗಳು ಕಡಿಮೆಯಾಗುತ್ತಿದ್ದಂತೆ ಕೊರೊನಾ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತದೆ. ಈರೀತಿ ಸಂದರ್ಭಗಳನ್ನು ಸೃಷ್ಟಿಸುವ ಕೆಲಸವೂ ನಡೆಯುತ್ತಿದೆ. ಒಟ್ಟಾರೆ ಕೋವಿಡ್ ಎಂಬ ಭಯವನ್ನು ಜೀವಂತವಾಗಿಡುವ ಉದ್ದೇಶಕ್ಕೆ ಮತ್ತೊಂದು ಅಲೆ ಬರುತ್ತದೆ, ಇನ್ನಷ್ಟು ಅಪಾಯಕಾರಿಯಾಗಿರುತ್ತದೆ ಎಂಬ ಹೇಳಿಕೆಗಳನ್ನು ನೀಡಲಾಗುತ್ತಿದೆ. ಈ ಮೂಲಕ ಇನ್ನು ಮೂರ್ನಾಲ್ಕು ತಿಂಗಳಿಗೆ ಮತ್ತೊಂದು ವೈರಸ್ ಹೆಸರಲ್ಲಿ ಒಂದಿಷ್ಟು ವ್ಯವಹಾರಗಳು, ಬ್ಯುಸಿನೆಸ್, ಹಣ ಮಾಡುವ ಕೆಲಸ ಅಭ್ಯಾಸವಾಗಿಬಿಟ್ಟಿದೆ.
ಮೂರು ಅಲೆಗಳು ಬಂದರೂ ಮಕ್ಕಳಿಗೆ ಯಾವುದೇ ತೊಂದರೆಯಾಗಿಲ್ಲ. ಕಾರಣ ಅವರಲ್ಲಿರುವ ಇಮ್ಯುನಿಟಿ. ಹಾಗಾಗಿ ಎಷ್ಟೇ ಅಲೆಗಳು ಬಂದರೂ ಭಯ ಪಡುವ ಅಗತ್ಯವಿಲ್ಲ. ಅನಗತ್ಯವಾಗಿ ಭಯಪಡುವ ಬದಲು ಜನಸಾಮಾನ್ಯರು ಬುದ್ಧಿವಂತರಾಗಬೇಕು ಎಚ್ಚೆತ್ತುಕೊಳ್ಳಬೇಕು. ಆರೋಗ್ಯದ ಬಗ್ಗೆ ಹೆಚ್ಚಿನ ಗಮನಕೊಡಿ ಹೊರತು ಅಲೆಗಳ ಬಗ್ಗೆ ಅಲ್ಲ ಎಂದು ಎಂದು ಸಲಹೆ ನೀಡಿದ್ದಾರೆ.