ಪೆಟ್ರೋಲ್ – ಡೀಸೆಲ್ ಬೆಲೆ ಮುಗಿಲು ಮುಟ್ಟಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ಈಗ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಕಂಪನಿಗಳು ಸಹ ಈ ವಾಹನಗಳ ತಯಾರಿಕೆಗೆ ಹೆಚ್ಚು ಒತ್ತು ನೀಡುತ್ತಿವೆ.
ಇದೀಗ ಬಾಡಿಗೆ ಬೈಕ್ ತಯಾರಿಕಾ ಸಂಸ್ಥೆ ಯೂಲು, ವಾಹನ ತಯಾರಿಕಾ ದಿಗ್ಗಜ ಬಜಾಜ್ ಜೊತೆ ಪಾಲುದಾರಿಕೆ ಮಾಡಿಕೊಂಡು ಎರಡು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಿದೆ.
ಜಿ ಆರ್ ಮತ್ತು ಡಿಕ್ಸ್ ಜಿ ಆರ್ ಎಂಬ ಎರಡು ವಾಹನಗಳು ಚಾಲಕ ಸ್ನೇಹಿ ಆಗಿದ್ದು, ಸುಗಮ ಚಾಲನೆಗೆ ಅನುಕೂಲವಾಗಲಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.