ಚಾರ್ಜಿಂಗ್ ಸ್ಟೇಷನ್ ಸ್ಕ್ರೀನ್‌ಗಳು ಹ್ಯಾಕ್ ಮಾಡಿದ್ದಲ್ಲದೆ, ಅದರಲ್ಲಿ ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿದ್ದನ್ನು ಕಂಡ ಇವಿ ಮಾಲೀಕರು ಆಘಾತಗೊಂಡ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ.
ಇಲ್ಲಿನ ಐಲ್ ಆಫ್ ವೈಟ್‌ನಲ್ಲಿರುವ ಕೌನ್ಸಿಲ್ ಕಾರ್ ಪಾರ್ಕ್‌ನಲ್ಲಿ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಮಾಲೀಕರು ಚಾರ್ಜ್ ಮಾಡಲು ಹೋಗಿದ್ದರು. ಪರದೆಯ ಮೇಲೆ ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಲು ಪಾರ್ಕ್‌ನಲ್ಲಿನ ಚಾರ್ಜಿಂಗ್ ಪಾಯಿಂಟ್‌ಗಳನ್ನು ಹ್ಯಾಕ್ ಮಾಡಲಾಗಿದೆ. ಚಾರ್ಜಿಂಗ್ ಪಾಯಿಂಟ್‌ಗಳು ಜಿನೀಪಾಯಿಂಟ್ ನೆಟ್‌ವರ್ಕ್‌ನ ಒಂದು ಭಾಗವಾಗಿತ್ತು.
ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಅಳವಡಿಸಲಾಗಿರುವ ಡಿಸ್‌ಪ್ಲೇ ಸ್ಕ್ರೀನ್‌ಗಳು ಕಂಪನಿಯ ವೆಬ್‌ಸೈಟ್ ಅನ್ನು ತೋರಿಸಲು ಉದ್ದೇಶಿಸಲಾಗಿದೆ. ಆದರೆ, ಕಿಡಿಗೇಡಿಗಳು ಇದನ್ನು ಹ್ಯಾಕ್ ಮಾಡಿ ಪರದೆಯಲ್ಲಿ ಅಶ್ಲೀಲ ಚಿತ್ರಗಳನ್ನು ಸ್ಟ್ರೀಮ್ ಮಾಡಿದ್ದಾರೆ.
ತಮ್ಮ ಇವಿಗಳನ್ನು ಚಾರ್ಜ್ ಮಾಡಲು ಬಂದ ಜನರಿಂದ ವೆಬ್ಸೈಟ್ ಹ್ಯಾಕ್ ಆಗಿರುವ ಬಗ್ಗೆ ವರದಿಯಾದ ನಂತರ ಕೌನ್ಸಿಲ್ ತಕ್ಷಣವೇ ಕ್ಷಮೆಯಾಚಿಸಿದೆ.