
ಹೌದು, ಗುರುಸೌರಭ್ ಸಿಂಗ್ ತಯಾರಿಸಿದ ಸಾಧನವನ್ನು ಕೈಗಾರಿಕೋದ್ಯಮಿ ಇಷ್ಟಪಟ್ಟಿದ್ದಾರೆ. ಸೈಕಲ್ಲನ್ನು ಎಲೆಕ್ಟ್ರಿಕ್ ಮೋಟಾರ್ ಬೈಕ್ ಅನ್ನಾಗಿ ಪರಿವರ್ತಿಸುವ ವಿಡಿಯೋ ಇದಾಗಿದೆ. ಬೈಸಿಕಲ್ ಅನ್ನು 25 ಕಿಮೀ ವೇಗದ ಸಾಮರ್ಥ್ಯವಿರುವ ವಿದ್ಯುತ್ ದ್ವಿಚಕ್ರ ವಾಹನವಾಗಿ ಪರಿವರ್ತಿಸಲಾಗಿದೆ. ಇದು ಅಗ್ನಿ ನಿರೋಧಕ ಮತ್ತು ಜಲನಿರೋಧಕ ಗುಣಗಳನ್ನು ಸಹ ಒಳಗೊಂಡಿದ್ದಾಗಿ ವಿಡಿಯೋದಲ್ಲಿ ತಿಳಿಸಲಾಗಿದೆ.
ಇನ್ನು ಸೈಕಲ್ ಅನ್ನು ಮೋಟಾರ್ ಸೈಕಲ್ ಆಗಿ ಪರಿವರ್ತಿಸುವ ಸಾಧನವು ತುಕ್ಕು ನಿರೋಧಕವಾಗಿದೆ. ವಿಮಾನ ದರ್ಜೆಯ ಅಲ್ಯೂಮಿನಿಯಂನಿಂದ ಇದು ಮಾಡಲ್ಪಟ್ಟಿದೆ ಮತ್ತು ಕಡಿಮೆ ತೂಕವನ್ನು ಹೊಂದಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಯುಎಸ್ ಬಿ ಚಾರ್ಜಿಂಗ್ ಪೋರ್ಟ್ ಜೊತೆಗೆ ಸಾಧನವು ಶೇ.50ರಷ್ಟು ಬ್ಯಾಟರಿ ಸಾಮರ್ಥ್ಯವನ್ನು ತಲುಪಲು 20 ನಿಮಿಷಗಳ ಪೆಡಲಿಂಗ್ ಅನ್ನು ತೆಗೆದುಕೊಳ್ಳುತ್ತದೆ.
ಸದ್ಯ, ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.