ಟೊಯೊಟಾ ಇತ್ತೀಚೆಗೆ ಇಂಡೋನೇಷ್ಯಾದಲ್ಲಿ ಹೊಸ ಇನ್ನೋವಾ ಜೆನಿಕ್ಸ್ ಅನ್ನು ಬಿಡುಗಡೆ ಮಾಡಿದೆ. ಈ ಮಾದರಿಯನ್ನು ಭಾರತದಲ್ಲಿ ಇನ್ನೋವಾ ಹೈಕ್ರಾಸ್ ಹೆಸರಿನಲ್ಲಿ ಕೆಲವು ಬದಲಾವಣೆಗಳೊಂದಿಗೆ ಪರಿಚಯಿಸಲಾಗಿದೆ. ಇದು ಜನವರಿ 2023 ರಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಹೊಸ ಹೈಕ್ರಾಸ್ ಅನ್ನು ಇನ್ನೋವಾ ಕ್ರಿಸ್ಟಾ ಜೊತೆಗೆ ಮಾರಾಟ ಮಾಡಲಾಗುತ್ತದೆ. ಇದೀಗ ಟೊಯೊಟಾ ಇನ್ನೋವಾ MPVಯ ಎಲೆಕ್ಟ್ರಿಕ್ ಆವೃತ್ತಿ ಕೂಡ ಕಾಣಿಸಿಕೊಂಡಿದೆ.
ಪ್ರಾಯೋಗಿಕ ಸಂಚಾರದ ವೇಳೆ ಇನ್ನೋವಾದ ಎಲೆಕ್ಟ್ರಿಕ್ ಕಾರು ಕ್ಯಾಮರಾದಲ್ಲಿ ಸೆರೆಯಾಗಿದೆ. ಟೊಯೊಟಾ ಕಂಪನಿ ತನ್ನ ಜನಪ್ರಿಯ MPV ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡುವುದು ಖಚಿತವಾಗಿದೆ. ಟೊಯೋಟಾ ಈ ವರ್ಷದ ಆರಂಭದಲ್ಲಿ ಇಂಡೋನೇಷ್ಯಾ ಇಂಟರ್ನ್ಯಾಷನಲ್ ಮೋಟಾರ್ ಶೋನಲ್ಲಿ Innova EV ಪರಿಕಲ್ಪನೆಯನ್ನು ಪ್ರದರ್ಶಿಸಿತ್ತು. ಇದೀಗ ಎಲೆಕ್ಟ್ರಿಕ್ MPV ಇಂಡೋನೇಷ್ಯಾದ ರಸ್ತೆಗಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ಮೂಲಗಳ ಪ್ರಕಾರ Innova EV ಪರಿಕಲ್ಪನೆ ಹೊಸ Zenix/Hycross ಅನ್ನು ಆಧರಿಸಿಲ್ಲ. ಭಾರತದಲ್ಲಿ ಮಾರಾಟವಾಗುವ Innova Crysta ಅನ್ನು ಆಧರಿಸಿದೆ. ಇನ್ನೋವಾ ಎಲೆಕ್ಟ್ರಿಕ್‌ನ ಸಿಲೂಯೆಟ್ ಬಹುತೇಕ ಕ್ರಿಸ್ಟಾದಂತೆಯೇ ಇರುತ್ತದೆ.
ಟೊಯೊಟಾ ಇದಕ್ಕೆ ಕೆಲವು EV ವಿನ್ಯಾಸ ಅಂಶಗಳನ್ನು ಸೇರಿಸಿದೆ. ಮುಂಭಾಗದ ಬಂಪರ್ ವಿನ್ಯಾಸ ಬದಲಾಗಿದೆ. ಹೆಡ್‌ಲ್ಯಾಂಪ್ ಸೆಟಪ್ ಮತ್ತು ಲೋಗೋದಲ್ಲಿ ನೀಲಿ ಬಣ್ಣವು ಗೋಚರಿಸುತ್ತದೆ.ಇದು ಹೊಸ ಮಿಶ್ರಲೋಹದ ಚಕ್ರಗಳನ್ನು ಪಡೆಯಲಿದೆ. ನೀಲಿ ಬಣ್ಣದ ಗ್ರಾಫಿಕ್ಸ್ ಎಲೆಕ್ಟ್ರಿಕ್ ಆವೃತ್ತಿಯನ್ನು ಹೈಲೈಟ್ ಮಾಡುತ್ತದೆ. ಇನ್ನೋವಾ ಎಲೆಕ್ಟ್ರಿಕ್‌ನ ಒಳಭಾಗವು ICE ಆವೃತ್ತಿಯಂತೆಯೇ ಇರಬಹುದು. ಇದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 3-ಸ್ಪೋಕ್ ಮಲ್ಟಿ-ಫಂಕ್ಷನಲ್ ಸ್ಟೀರಿಂಗ್ ವೀಲ್, ನೀಲಿ ಗ್ರಾಫಿಕ್ಸ್‌ನೊಂದಿಗೆ ಅನಲಾಗ್ ಇನ್‌ಸ್ಟ್ರುಮೆಂಟ್ ಕನ್ಸೋಲ್ ಅನ್ನು ಪಡೆಯಬಹುದು ಅನ್ನೋ ಅಂದಾಜಿದೆ.