ಬೆಂಗಳೂರು ಮೂಲದ EV ಸ್ಟಾರ್ಟಪ್ ಓಲಾ ಎಲೆಕ್ಟ್ರಿಕ್ 2021ರ ಆಗಸ್ಟ್‌ನಲ್ಲಿ S1 ಮತ್ತು S1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. 2022ರಲ್ಲಿ ಓಲಾ 1.5 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ.
ಇ-ಮೋಟಾರ್ ಸೈಕಲ್ ಮತ್ತು ಎಲೆಕ್ಟ್ರಿಕ್ ಕಾರ್ ಬಿಡುಗಡೆ ಸೇರಿದಂತೆ ತನ್ನ ಭವಿಷ್ಯದ ಯೋಜನೆಗಳನ್ನು ಸಹ ಓಲಾ ಕಂಪನಿ ಘೋಷಿಸಿದೆ. ಓಲಾ ಎಲೆಕ್ಟ್ರಿಕ್ 2023ರಲ್ಲೂ ಹಲವಾರು ಉತ್ಪನ್ನಗಳನ್ನು ಪರಿಚಯಿಸಲು ಯೋಜಿಸಿದೆ. 2023 ಮತ್ತು 2024 ರಲ್ಲಿ Ola ಮಾಸ್ ಮಾರ್ಕೆಟ್ ಸ್ಕೂಟರ್, ಮಾಸ್ ಮಾರ್ಕೆಟ್ ಮೋಟಾರ್ ಸೈಕಲ್ ಮತ್ತು ಹಲವಾರು ಪ್ರೀಮಿಯಂ ಮೋಟಾರ್ ಸೈಕಲ್‌ಗಳನ್ನು ಬಿಡುಗಡೆ ಮಾಡಲಿದೆ. ಶೀಘ್ರದಲ್ಲೇ ಎಲೆಕ್ಟ್ರಿಕ್ ವೆಹಿಕಲ್‌ಗಳನ್ನು ಇತರ ಜಾಗತಿಕ ಮಾರುಕಟ್ಟೆಗಳಿಗೂ ರಫ್ತು ಮಾಡಲಿದೆ.
2024ರಲ್ಲಿ ಚೊಚ್ಚಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಓಲಾ ಉದ್ದೇಶಿಸಿದೆ. 2027ರ ವೇಳೆಗೆ ಆರು ವಿಭಿನ್ನ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಗುರಿಯನ್ನು ಸಂಸ್ಥೆ ಹೊಂದಿದೆ. Ola ಪ್ರಸ್ತುತ S1 ಏರ್, S1 ಮತ್ತು S1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೊಂದಿದೆ.