alex Certify ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸ್ತಿದ್ದೀರಾ ? ಎಚ್ಚರ, ಆನ್‌ಲೈನ್‌ ಬುಕ್ಕಿಂಗ್‌ ಹೆಸರಲ್ಲಿ ನಡೀತಿದೆ ಭಾರೀ ವಂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸ್ತಿದ್ದೀರಾ ? ಎಚ್ಚರ, ಆನ್‌ಲೈನ್‌ ಬುಕ್ಕಿಂಗ್‌ ಹೆಸರಲ್ಲಿ ನಡೀತಿದೆ ಭಾರೀ ವಂಚನೆ

ದೇಶದಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇವಿ ತಯಾರಕ ಕಂಪನಿಗಳ ಸಂಖ್ಯೆಯೂ ಜಾಸ್ತಿಯಾಗಿದೆ. ಆದರೆ ಎಲೆಕ್ಟ್ರಿಕ್‌ ಸ್ಕೂಟರ್‌ ಹೆಸರಲ್ಲಿ ಗ್ರಾಹಕರನ್ನು ವಂಚಿಸ್ತಿದ್ದಾರೆ ಖದೀಮರು. ಇವಿ ಮಾರುಕಟ್ಟೆಗೂ ವಂಚಕರು ಪ್ರವೇಶಿಸಿದ್ದಾರೆ. ಇಂಥದ್ದೇ ವಂಚಕರ ತಂಡವೊಂದು ಇತ್ತೀಚೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಈ ಪ್ರಕರಣದಲ್ಲಿ 20 ಮಂದಿಯನ್ನು ಬಂಧಿಸಲಾಗಿದೆ.

ಮೂರು ರಾಜ್ಯಗಳ 20 ವಂಚಕರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುವ ನೆಪದಲ್ಲಿ 1,000ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದಾರೆ. ಆನ್‌ಲೈನ್‌ನಲ್ಲಿ ಸ್ಕೂಟರ್‌ ಬುಕ್ಕಿಂಗ್‌ ಹೆಸರಿನಲ್ಲಿ ಜನರಿಗೆ ಸಾವಿರಾರು ರೂಪಾಯಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ವಂಚಕರು ನಕಲಿ ವೆಬ್‌ಸೈಟ್‌ ಸೃಷ್ಟಿಸಿದ್ದರು. ಇಲ್ಲಿ ಗ್ರಾಹಕರಿಂದ ಬುಕ್ಕಿಂಗ್‌ಗಾಗಿ 499 ರೂಪಾಯಿಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿಸಿಕೊಳ್ಳಲಾಗಿದೆ. ನಂತರ ಸಾರಿಗೆ ಮತ್ತು ವಾಹನ ವಿಮೆಗಾಗಿ ಹಣವನ್ನು ವರ್ಗಾಯಿಸುವಂತೆ ಕೇಳಿದ್ದಾರೆ. ಜನಸಾಮಾನ್ಯರಿಂದ ಹಣ ಪಡೆದ ನಂತರ ಸ್ಕೂಟರ್ ವಿತರಣೆಯಲ್ಲಿ ವಿಳಂಬವಾಗುತ್ತದೆ ಎಂದು ಸಬೂಬು ಹೇಳಿ ವಂಚಕರು ಅವರನ್ನು ಮೂರ್ಖರನ್ನಾಗಿಸುತ್ತಿದ್ದರು.

ಬಂಧಿತ 20 ಆರೋಪಿಗಳಲ್ಲಿ 11 ಮಂದಿ ಬಿಹಾರ, 4 ಮಂದಿ ತೆಲಂಗಾಣ, 3 ಮಂದಿ ಜಾರ್ಖಂಡ್ ಮತ್ತು ಇಬ್ಬರು  ಕರ್ನಾಟಕದವರು. ಸ್ಕೂಟರ್‌ ಬುಕ್ಕಿಂಗ್‌ ಹೆಸರಲ್ಲಿ 30,998 ರೂಪಾಯಿ ಕಳೆದುಕೊಂಡಿರುವುದಾಗಿ ವ್ಯಕ್ತಿಯೊಬ್ಬರು ದೂರು ನೀಡಿದಾಗ ವಂಚನೆಯ ಜಾಲ ಬೆಳಕಿಗೆ ಬಂದಿದೆ. ಶಂಕಿತರಲ್ಲಿ ಒಬ್ಬನನ್ನು ಬೆಂಗಳೂರಲ್ಲಿ ಪತ್ತೆಹಚ್ಚಲಾಯಿತು. ಅಂತಿಮವಾಗಿ ಇಡೀ ಗ್ಯಾಂಗ್‌ ಅನ್ನು ಪೊಲೀಸರು ಬೇಟೆಯಾಡಿದ್ದಾರೆ. ಇವರಿಂದ 7 ಲ್ಯಾಪ್‌ಟಾಪ್‌ಗಳು, 38 ಸ್ಮಾರ್ಟ್‌ಫೋನ್‌ಗಳು, 25 ಬೇಸಿಕ್ ಫೋನ್‌ಗಳು, ಎರಡು ಹಾರ್ಡ್ ಡಿಸ್ಕ್‌ಗಳು, ಎರಡು ಸ್ಮಾರ್ಟ್‌ವಾಚ್‌ಗಳು ಮತ್ತು 114 ಸಿಮ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...