alex Certify ಎಲೆಕ್ಟ್ರಿಕ್‌ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ‌ʼಗುಡ್‌ ನ್ಯೂಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಟ್ರಿಕ್‌ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ‌ʼಗುಡ್‌ ನ್ಯೂಸ್ʼ

ಸದ್ಯದಲ್ಲೇ ಎಲೆಕ್ಟ್ರಿಕ್‌ ಕಾರುಗಳನ್ನು ಕೊಂಡುಕೊಳ್ಳಲು ಪ್ಲಾನ್‌ ಮಾಡಿರುವವರಿಗೆ ಸಮಾಧಾನಕರ ಸುದ್ದಿ ಇದೆ. ಇನ್ನೆರಡು ವರ್ಷಗಳಲ್ಲಿ ಎಲೆಕ್ಟ್ರಿಕ್‌ ಕಾರುಗಳು ಕೂಡ ಅಗ್ಗವಾಗಲಿವೆಯಂತೆ. ದೇಶದ ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಬೆಲೆಗಳು ಪೆಟ್ರೋಲ್ ವಾಹನಗಳ ಬೆಲೆಗೆ ಸಮನಾಗಿರುತ್ತವೆ ಅಂತಾ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಲೋಕಸಭೆಯಲ್ಲಿ ಅವರು ಮಾತನಾಡುತ್ತಿದ್ರು.

ಸಂಸತ್ತಿನ ಆವರಣದಲ್ಲಿ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಿದ ನಂತರ ಸಂಸದರು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಬಹುದು ಎಂದು ಗಡ್ಕರಿ ಹೇಳಿದ್ರು. “ಮುಂದಿನ ಎರಡು ವರ್ಷಗಳಲ್ಲಿ ದೇಶ ಬದಲಾಗಲಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು ಮತ್ತು ಎಲೆಕ್ಟ್ರಿಕ್ ನಾಲ್ಕು ಚಕ್ರಗಳ ಬೆಲೆಯು ಪೆಟ್ರೋಲ್ ವಾಹನಗಳ ಬೆಲೆಗೆ ಸಮನಾಗಿರುತ್ತದೆ. ಈ ಬಗ್ಗೆ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಭರವಸೆ ನೀಡುತ್ತೇನೆ ಅಂತಾ ಗಡ್ಕರಿ  ಪ್ರಶ್ನೋತ್ತರ ಅವಧಿಯಲ್ಲಿ ಹೇಳಿದ್ರು.

ಯುಗಾದಿ ಹೊತ್ತಲ್ಲೇ ದೇಶದ ಜನತೆಗೆ ಶಾಕಿಂಗ್ ನ್ಯೂಸ್: LPG ಸಿಲಿಂಡರ್ ದರ 250 ರೂ. ಹೆಚ್ಚಳ

ಆಮದು ಬದಲಿ, ಪರಿಣಾಮಕಾರಿ ವೆಚ್ಚ, ಮಾಲಿನ್ಯ ಮುಕ್ತ ಮತ್ತು ಸ್ವದೇಶಿ ಉತ್ಪಾದನೆಯೇ ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆ ಅಂತಾ ಅವರು ಸ್ಪಷ್ಟಪಡಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದಿಂದಾಗಿ ಸಾಕಷ್ಟು ಸಮಸ್ಯೆಯಾಗ್ತಿದೆ. ಹಾಗಾಗಿ ಗ್ರೀನ್‌ ಹೈಡ್ರೋಜನ್, ವಿದ್ಯುತ್, ಎಥೆನಾಲ್, ಮೆಥನಾಲ್, ಜೈವಿಕ-ಡೀಸೆಲ್, ಜೈವಿಕ-ಎಲ್ಎನ್ಜಿ ಮತ್ತು bio-CNG ಯನ್ನು ಪರ್ಯಾಯ ಇಂಧನವಾಗಿ ಬಳಸಿಕೊಳ್ಳಲು ಸರ್ಕಾರ ಸಾಕಷ್ಟು ಪ್ರಯತ್ನ ನಡೆಸ್ತಾ ಇದೆ ಅಂತಾ ತಿಳಿಸಿದ್ದಾರೆ.

ಸಂಸತ್ತಿನ ಪಾರ್ಕಿಂಗ್‌ ಲಾಟ್‌ ನಲ್ಲಿ ಚಾರ್ಜಿಂಗ್‌ ಸ್ಟೇಶನ್‌ ಸ್ಥಾಪಿಸಲು ಅವಕಾಶ ಮಾಡಿಕೊಡಿ ಅಂತಾ ಗಡ್ಕರಿ, ಸ್ಪೀಕರ್‌ ಗೆ ಮನವಿ ಕೂಡ ಮಾಡಿದ್ದಾರೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಈ ರೀತಿ ಚಾರ್ಜಿಂಗ್‌ ಸ್ಟೇಶನ್‌ ಸ್ಥಾಪಿಸುವ ಉದ್ದೇಶವಿದೆ ಎಂದ್ರು.

ಸೋಲಾರ್‌ ಹಾಗೂ ವಿಂಡ್‌ ಪರವ್‌ ಬಳಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿ 40 ಕಿಮೀಗೆ ರಸ್ತೆ ಬದಿಯ ಸೌಕರ್ಯವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿವೃದ್ಧಿಪಡಿಸ್ತಾ ಇದೆ. ಇಲ್ಲಿ ಚಾರ್ಜಿಂಗ್‌ ಸ್ಟೇಶನ್‌ ಗಳನ್ನು ಸ್ಥಾಪಿಸಲಾಗ್ತಿದೆ. ಈಗಾಗ್ಲೇ 39 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇನ್ನೂ 103 ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಯೋಜನೆ ಸಿದ್ಧವಾಗಿದೆ ಅಂತಾ ಗಡ್ಕರಿ ಮಾಹಿತಿ ನೀಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...