ಬೆಂಗಳೂರು: ದೇಶದಲ್ಲಿ ವಿದ್ಯುತ್ ವಾಹನಗಳ(ಇವಿ) ಬಳಕೆಯನ್ನು ಪ್ರೋತ್ಸಾಹಿಸುವ ತನ್ನ ಪ್ರಯತ್ನದ ಭಾಗವಾಗಿ, ಭಾರತದ ಮುಂಚೂಣಿ ಆಟೋಮೋಟಿವ್ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್, ತನ್ನ ಅಧಿಕೃತ ಪ್ಯಾಸೆಂಜರ್ ಇವಿ ಡೀಲ್‌ಗಳಿಗೆ ಇವಿ ಡೀಲರ್ ಹಣಕಾಸು ನೆರವು ಒದಗಿಸುವುದಕ್ಕಾಗಿ ಐಸಿಐಸಿಐ ಬ್ಯಾಂಕ್‌ನೊಂದಿಗೆ ತನ್ನ ಸಹಭಾಗಿತ್ವ ಏರ್ಪಡಿಸಿಕೊಂಡಿರುವುದನ್ನು ಘೋಷಿಸಿದೆ.
ಈ ಯೋಜನೆಯಡಿ, ಐಸಿಐಸಿಐ ಬ್ಯಾಂಕ್, ಟಾಟಾ ಮೋಟರ್ಸ್‌ನ ಅಧಿಕೃತ ಪ್ಯಾಸೆಂಜರ್ ಇವಿ ಡೀಲರ್‌ಗಳಿಗೆ ಬಂಡವಾಳ ಹಣಕಾಸು ನೆರವು ಒದಗಿಸಲಿದೆ. ಈ ಬಂಡವಾಳ ಹಣಕಾಸು ನೆರವು, ಡೀಸಲ್ ಮತ್ತು ಪೆಟ್ರೋಲ್ ಮಾಡಲ್‌ಗಳಿಗೆ ಬ್ಯಾಂಕ್ ಒದಗಿಸುವ ಹಣಕಾಸು ನೆರವಿಗೆ ಹೆಚ್ಚುವರಿಯಾಗಿ ಸಿಗಲಿದೆ. ಈ ಸೌಲಭ್ಯದಡಿ, ಇವಿ ಡೀಲ್‌ಗಳು ಪರಿವರ್ತಿಸಬಹುದಾದ ಮರುಪಾವತಿ ಅವಧಿಗಳ ಆಯ್ಕೆ ಮಾಡಿಕೊಳ್ಳಬಹುದು.
ಈ ಸಹಭಾಗಿತ್ವದ ಒಪ್ಪಂದಕ್ಕೆ, ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿ., ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿ.,ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶೈಲೇಶ್ ಚಂದ್ರ ಹಾಗೂ ಐಸಿಐಸಿಐ ಬ್ಯಾಂಕ್ ಲಿ.,ನ ಕಾರ್ಯಕಾರೀ ನಿರ್ದೇಶಕ ಶ್ರೀ ರಾಕೇಶ್ ಝಾ ಸಹಿ ಹಾಕಿದ್ದಾರೆ.