ಎಲೆಕ್ಟ್ರಿಕ್ ಕಾರುಗಳು ನಿಧಾನವಾಗಿ ಭಾರತೀಯ ಮಾರುಕಟ್ಟೆಗೆ ಕಾಲಿಡಲಾರಂಭಿಸಿವೆ. ಆರಂಭದಲ್ಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿವೆ. ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ಕಾರುಗಳ ಮಾರಾಟವೂ ಹೆಚ್ಚಾಗುತ್ತಿದೆ.
ಟಾಟಾ ಮೋಟಾರ್ಸ್ ಭಾರತದಲ್ಲಿ ಎಲೆಕ್ಟ್ರಿಕ್ ಪ್ರಯಾಣಿಕ ವಾಹನ ವಿಭಾಗದಲ್ಲಿ ಪ್ರಾಬಲ್ಯ ಹೊಂದಿದೆ. ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರು, ಮಾರುಕಟ್ಟೆ ವಿಭಾಗದಲ್ಲಿ ಸುಮಾರು 80 ಪ್ರತಿಶತದಷ್ಟು ಪಾಲನ್ನು ಹೊಂದಿದೆ. 2022ರ ಸೆಪ್ಟೆಂಬರ್‌ನಲ್ಲಿ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರುಗಳು ಯಾವುವು ಅನ್ನೋದನ್ನು ನೋಡೋಣ.
ಟಾಟಾ ನೆಕ್ಸಾನ್ ಇವಿ
ಟಾಟಾ ನೆಕ್ಸಾನ್ ಇವಿ ಕಳೆದ ತಿಂಗಳು 2,847 ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಅತಿ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರು ಎನಿಸಿಕೊಂಡಿದೆ. ಇದು ಎರಡು ರೂಪಾಂತರಗಳಲ್ಲಿ ಬರುತ್ತದೆ – ಪ್ರೈಮ್ ಮತ್ತು ಮ್ಯಾಕ್ಸ್. ಬೆಲೆಗಳು 14.99 ಲಕ್ಷದಿಂದ ರೂಪಾಯಿಯಿಂದ ಆರಂಭವಾಗಿ 20.04 ಲಕ್ಷ ರೂಪಾಯಿವರೆಗೂ ಇವೆ.
ಟಾಟಾ Tigor ಇವಿ
ಟಾಟಾ ಮೋಟಾರ್ಸ್ ಸೆಪ್ಟೆಂಬರ್‌ನಲ್ಲಿ Tigor EVಯ 808 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಈ ಎಲೆಕ್ಟ್ರಿಕ್ ಸೆಡಾನ್ 26 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಭಾರತದಲ್ಲಿ ಟಾಟಾ Tigor EV ಬೆಲೆ ಪ್ರಸ್ತುತ 12.24 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ.
MG ZS EV
MG ಮೋಟಾರ್ ಇಂಡಿಯಾ ಈ ವರ್ಷದ ಆರಂಭದಲ್ಲಿ ZS EV ಅನ್ನು ನವೀಕರಿಸಿದೆ. ಸೆಪ್ಟೆಂಬರ್ 2022ರಲ್ಲಿ, ಈ ಎಲೆಕ್ಟ್ರಿಕ್ SUVಯ 412 ಕಾರುಗಳನ್ನು ಮಾರಾಟ ಮಾಡಲಾಗಿದೆ. MG ZS EVಯ ಪ್ರಸ್ತುತ ಬೆಲೆ 22.58 ಲಕ್ಷ ರೂಪಾಯಿಯಿಂದ ಆರಂಭ.
ಹುಂಡೈ ಕೋನಾ ಎಲೆಕ್ಟ್ರಿಕ್
ದಕ್ಷಿಣ ಕೊರಿಯಾದ ಈ ಕಾರು ತಯಾರಕ ಕಂಪನಿ ಕಳೆದ ತಿಂಗಳು ಭಾರತದಲ್ಲಿ 121 ಕೋನಾ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದೆ. ಇದು 39.2 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಹ್ಯುಂಡೈ ಕೋನಾ ಎಲೆಕ್ಟ್ರಿಕ್‌ನ ಪ್ರಸ್ತುತ ಬೆಲೆ 23.84 ಲಕ್ಷ ರೂಪಾಯಿಯಿಂದ ಆರಂಭ.
BYD e6
BYD ಚೀನೀ ಕಂಪನಿಯಾಗಿದ್ದು, ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ e6 MPVಯ 63 ಕಾರುಗಳನ್ನು ಮಾರಾಟ ಮಾಡಿದೆ. BYD e6 ಎಲೆಕ್ಟ್ರಿಕ್ MPV 71.7 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದರ ಆರಂಭಿಕ ಬೆಲೆ 29.15 ಲಕ್ಷ ರೂಪಾಯಿ.