ಟೊಯೊಟಾ ಮೋಟಾರ್ ದೇಶದಲ್ಲಿ ಗ್ರೀನ್ ಮೊಬಿಲಿಟಿ ವಿಭಾಗದಲ್ಲಿ ತನ್ನ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮುಂದಿನ ಕೆಲವು ವರ್ಷಗಳಲ್ಲಿ ಹಲವಾರು ಹೈಬ್ರಿಡ್ ವಾಹನಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಇದರಲ್ಲಿ ಮೊದಲನೆಯ ಉತ್ಪನ್ನವು ಸ್ಥಳೀಯವಾಗಿ ತಯಾರಾಗಲಿದ್ದು ಮುಂದಿನ ವರ್ಷದಲ್ಲಿ ರಸ್ತೆಗೆ ಇಳಿಯಲಿದೆ.
ಜಪಾನಿನ ವಾಹನ ತಯಾರಕರ ಸ್ಥಳೀಯ ಘಟಕ, ಟೋಯೊಟಾ ಕಿರ್ಲೋಸ್ಕರ್ ಮೋಟಾರ್, ಸಿಎನ್ಜಿ, ಎಥೆನಾಲ್, ಎಲೆಕ್ಟ್ರಿಕ್ ಹಾಗೂ ಹಸಿರು ಹೈಡ್ರೋಜನ್ ಚಾಲಿತ ವಾಹನಗಳನ್ನು ಉತ್ಪಾದಿಸುವ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡುತ್ತಿದೆ, ದೇಶಿಯ ಮಾರುಕಟ್ಟೆ ಹಾಗೂ ರಫ್ತು ಎರಡಕ್ಕೂ 2 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ.
ಭಾರತದಲ್ಲಿ 70 ಪ್ರತಿಶತದಷ್ಟು ವಿದ್ಯುತ್ನ್ನು ಕಲ್ಲಿದ್ದಲು ಆಧಾರಿತ ಸ್ಥಾವರಗಳಿಂದ ಉತ್ಪಾದಿಸಲಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಇಚ್ಛಿಸುತ್ತೇವೆ. ಒಟ್ಟಾರೆ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಟಿಕೆಎಂ ಉಪಾಧ್ಯಕ್ಷ ವಿಕ್ರಂ ಕಿರ್ಲೋಸ್ಕರ್ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ.