ಮಂಗಳವಾರ ರಾತ್ರಿ 189 ಕ್ಷೇತ್ರಗಳಿಗೆ ಬಿಜೆಪಿ ಪಟ್ಟಿ ಪ್ರಕಟವಾಗಿದ್ದು, ಇದರಲ್ಲಿ ಸಚಿವರುಗಳಾದ ಆರ್. ಅಶೋಕ್ ಹಾಗೂ ವಿ. ಸೋಮಣ್ಣ ಅವರಿಗೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಅವಕಾಶ ಲಭ್ಯವಾಗಿದೆ.
ಆರ್. ಅಶೋಕ್ ಅವರಿಗೆ ಪದ್ಮನಾಭ ನಗರ ಕ್ಷೇತ್ರದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪರ್ಧಿಸಲಿರುವ ಕನಕಪುರ ಕ್ಷೇತ್ರದಲ್ಲೂ ಸ್ಪರ್ಧಿಸಲು ಅವಕಾಶ ಸಿಕ್ಕಿದ್ದರೆ, ವಿ. ಸೋಮಣ್ಣ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣಕ್ಕಿಳಿಯುತ್ತಿರುವ ವರುಣಾ ಕ್ಷೇತ್ರದ ಜೊತೆಗೆ ಚಾಮರಾಜ ನಗರದಿಂದ ಸ್ಪರ್ಧಿಸಲು ಟಿಕೆಟ್ ಘೋಷಣೆಯಾಗಿದೆ.
ಆ ಬಳಿಕ ಮಾತನಾಡಿದ್ದ ಆರ್. ಅಶೋಕ್ ತಾವು ಪದ್ಮನಾಭ ನಗರದಲ್ಲಿ ಗೆಲ್ಲುವುದು ಖಚಿತವಾಗಿದ್ದು, ಹೀಗಾಗಿ ಕನಕಪುರ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ತಮಿಳುನಾಡಿನ ತಿರುವಣ್ಣಾಮಲೈಗೆ ಭೇಟಿ ನೀಡಿರುವ ಆರ್. ಅಶೋಕ್ ದೇವರ ದರ್ಶನ ಪಡೆದಿದ್ದಾರೆ.