ಐಎಎಸ್ ಅಧಿಕಾರಿ ಟೀನಾ ಡಾಬಿ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದು ಅವರಿಗೆ ಎರಡನೇ ವಿವಾಹವಾಗಿದ್ದು ಐಎಎಸ್ ಅಧಿಕಾರಿ ಪ್ರದೀಪ್ ಗಾವಂಡೆ ಅವರನ್ನು ವರಿಸಲಿದ್ದಾರೆ.
ಜೈಪುರದ ಹೋಟೆಲ್ ಒಂದರಲ್ಲಿ ವಿವಾಹ ಸಮಾರಂಭವನ್ನು ಏರ್ಪಡಿಸಲಾಗಿದ್ದು ಮರಾಠಿ ಮತ್ತು ರಾಜಸ್ಥಾನಿ ಪದ್ಧತಿಯಲ್ಲಿ ವಿವಾಹ ನೆರವೇರಲಿದೆ. ಎರಡು ಕುಟುಂಬದ ಬಂಧುಗಳು ಮತ್ತು ಸ್ನೇಹಿತರಿಗಷ್ಟೇ ಆಹ್ವಾನ ನೀಡಲಾಗಿದೆ.
ಇತ್ತೀಚಿಗೆ ಟೀನಾ ಡಾಬಿ ಅವರ ನಿಶ್ಚಿತಾರ್ಥ ಪ್ರದೀಪ್ ಅವರೊಂದಿಗೆ ನೆರವೇರಿದ್ದು ಸಮಾರಂಭದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
2018ರಲ್ಲಿ ಟೀನಾ ಮತ್ತು ಅಮಿರ್ ಉಲ್ ಶಫಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. 2020 ನವಂಬರ್ ನಲ್ಲಿ ವಿವಾಹವಾದ ಎರಡೇ ವರ್ಷಕ್ಕೆ ಟೀನಾ ಮೊದಲ ಪತಿ ಅಮೀರ್ ಅವರಿಂದ ವಿಚ್ಛೇದನ ಪಡೆದಿದ್ದರು.
ಟೀನಾ ಡಾಬಿ 2015ರ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮೊದಲ ದಲಿತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೀಗ ಟೀನಾ ಅವರು 2013ನೇ ಬ್ಯಾಚ್ ಐಎಎಸ್ ಅಧಿಕಾರಿ ಮಹಾರಾಷ್ಟ್ರದ ಪ್ರದೀಪ್ ಗಾವಂಡೆ ಅವರನ್ನು ವರಿಸಲಿದ್ದಾರೆ.
ಪ್ರಸ್ತುತ ಟೀನಾ ಡಾಬಿ ರಾಜಸ್ಥಾನದ ಹಣಕಾಸು ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರದೀಪ್ ಅವರು ರಾಜಸ್ಥಾನದ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ಇಲಾಖೆಯ ನಿರ್ದೇಶಕರಾಗಿದ್ದಾರೆ.
ಅಂತರ್ಧರ್ಮೀಯ ಮದುವೆ ಐಎಎಸ್ ಟಾಪರ್ ಗಳ ಪ್ರೇಮ ಪ್ರಸಂಗ ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನೆಗಳು ಮುಂತಾದ ಹಲವು ಕಾರಣಗಳಿಂದ ಟೀನಾ ಡಾಬಿ 2016 ರಿಂದಲೂ ಸುದ್ದಿಯಲ್ಲಿದ್ದಾರೆ.