ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹಾಗೂ ಸಫಾ ದಂಪತಿ ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ತಮ್ಮ ಗಂಡು ಮಗು ಜನಿಸಿರುವ ಬಗ್ಗೆ ಇರ್ಫಾನ್ ಪಠಾಣ್ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಮಗುವಿಗೆ ದಂಪತಿ ಸುಲೈಮಾನ್ ಖಾನ್ ಎಂದು ನಾಮಕರಣ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಗುಡ್ ನ್ಯೂಸ್ ಶೇರ್ ಮಾಡಿರುವ ಇರ್ಫಾನ್ ಪಠಾಣ್, ಸಫಾ ಹಾಗೂ ನಾನು ಗಂಡು ಮಗು ಸುಲೈಮಾನ್ ಖಾನ್ನ್ನು ಬರಮಾಡಿಕೊಂಡಿದ್ದೇವೆ. ತಾಯಿ ಹಾಗೂ ಮಗುವಿನ ಆರೋಗ್ಯ ಕ್ಷೇಮವಾಗಿದೆ ಎಂದು ಬರೆದುಕೊಂಡಿದ್ದಾರೆ.
ಈ ದಂಪತಿಗಳಿಗೆ ಇಮ್ರಾನ್ ಹೆಸರಿನ ಪುತ್ರ ಕೂಡ ಇದ್ದಾನೆ. ಇರ್ಫಾನ್ ಖಾನ್ ಈ ಶುಭಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಂತೆಯೇ ಕಮೆಂಟ್ ಸೆಕ್ಷನ್ನಲ್ಲಿ ಶುಭಾಶಯಗಳ ಸುರಿಮಳೆಯೇ ಹರಿದಿದೆ.