ಎಮ್ಮೆಗಳಿಗೆ ಮೈ ತೊಳೆಯಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿಯಲ್ಲಿ ನಡೆದಿದೆ.
55 ವರ್ಷದ ಈರಪ್ಪ ಮೃತಪಟ್ಟವರಾಗಿದ್ದು, ಇವರು ಸೋಮವಾರ ಬೆಳಗ್ಗೆ ಎಮ್ಮೆಗಳನ್ನು ಮೇಯಿಸಲು ಹೋಗಿದ್ದರು. ಆದರೆ ಸಂಜೆ ಬಳಿಕ ಎಮ್ಮೆಗಳು ಮನೆಗೆ ಬಂದಿದ್ದು, ಈರಪ್ಪ ಬಂದಿರಲಿಲ್ಲ.
ಇದರಿಂದ ಅನುಮಾನ ಗೊಂಡ ಕುಟುಂಬಸ್ಥರು ಹುಡುಕಾಡಿದಾಗ ಕುಂಸಿಯ ಹಿರೇಕೆರೆ ಬಳಿ ಅವರ ಚಪ್ಪಲಿಗಳು ಪತ್ತೆಯಾಗಿದ್ದವು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಅವರ ಮೃತ ದೇಹವನ್ನು ಪತ್ತೆ ಹಚ್ಚಿದ್ದಾರೆ.