alex Certify ಎಮ್ಮೆಗಳ ಪ್ರಾಣ ಉಳಿಸಲು ರೈಲನ್ನೇ ನಿಲ್ಲಿಸಿದ ಲೋಕೋ ಪೈಲೆಟ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಮ್ಮೆಗಳ ಪ್ರಾಣ ಉಳಿಸಲು ರೈಲನ್ನೇ ನಿಲ್ಲಿಸಿದ ಲೋಕೋ ಪೈಲೆಟ್…!

KAVACH: 2000 km network to be brought by Indian Railways under 'KAVACH' in  2022-23ದೇಶದಲ್ಲಿ ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ರೈಲು ದುರಂತದಲ್ಲಿ ಜನ – ಜಾನುವಾರುಗಳ ಸಾವು ಸಂಭವಿಸುತ್ತದೆ. ಇವುಗಳನ್ನು ತಪ್ಪಿಸಲು ಲೋಕೋ ಪೈಲೆಟ್ ಗಳು ಪ್ರಯತ್ನಿಸುತ್ತಾರಾದರೂ ಅತಿ ವೇಗದಲ್ಲಿ ಇದ್ದ ವೇಳೆ ಇದು ಸಾಧ್ಯವಾಗುವುದಿಲ್ಲ.

ಆದರೆ ಪ್ರಕರಣವೊಂದರಲ್ಲಿ ಮಾನವೀಯತೆ ಮೆರೆದ ಲೋಕೋ ಪೈಲೆಟ್ ಹಳಿಗಳ ಮೇಲೆ ನಿಂತಿದ್ದ ಎಮ್ಮೆಗಳ ಪ್ರಾಣ ಉಳಿಸಲು ರೈಲನ್ನೇ ನಿಲ್ಲಿಸಿದ್ದಾರೆ. ಇಂತಹದೊಂದು ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ತಾಳಗುಪ್ಪದಿಂದ ಶಿವಮೊಗ್ಗಕ್ಕೆ ಪ್ಯಾಸೆಂಜರ್ ರೈಲು ಬರುತ್ತಿದ್ದ ವೇಳೆ ಕಾಶಿಪುರ ಗೇಟ್ ಡಳಿ ಹಳಿಗಳ ಮೇಲೆ ಎಮ್ಮೆಗಳ ಹಿಂಡು ನಿಂತಿರುವುದನ್ನು ಲೋಕೋ ಪೈಲೆಟ್ ಗಮನಿಸಿದ್ದಾರೆ.

ಕೂಡಲೇ ಅವರು ರೈಲು ನಿಲ್ಲಿಸಿದ್ದು ಎಮ್ಮೆಗಳು ಹಳಿಗಳ ಮೇಲಿನಿಂದ ಇಳಿದು ಹೋದ ನಂತರ ರೈಲು ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಇದನ್ನು ಗಮನಿಸಿದ ವಾಹನ ಸವಾರರು, ಲೋಕೋ ಪೈಲೆಟ್ ಮಾನವೀಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...