ದೆಹಲಿಯ ಕರಿಯಪ್ಪ ಮೈದಾನದಲ್ಲಿ ನಡೆದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ರ್ಯಾಲಿಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಸಿಖ್ ಕೆಡೆಟ್ ಪೇಟವನ್ನು ಧರಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಎನ್ಸಿಸಿ ತುಕಡಿಗಳಿಂದ ಗಾರ್ಡ್ ಆಫ್ ಆನರ್ ಸ್ವೀಕರಿಸಿದರು. ಇದಾದ ಬಳಿಕ ಮಾರ್ಚ್ಪಾಸ್ಟ್ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಉತ್ತಮ ಕೆಡೆಟ್ಗಳಿಗೆ ಪದಕ ಹಾಗೂ ಲಾಠಿ ನೀಡಿ ಗೌರವಿಸಲಾಯ್ತು.
ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಫೋಟೋಗಳಲ್ಲಿ ಪ್ರಧಾನಿ ಮೋದಿ ರೈಫಲ್ ಹಸಿರು ಪೇಟವನ್ನು ಧರಿಸಿದ್ದು ಅದರಲ್ಲಿ ಕೆಂಪು ಬಣ್ಣದ ಗರಿಯನ್ನು ಕಾಣಬಹುದಾಗಿದೆ.
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ನಾನು ಕೂಡ ನಿಮ್ಮಂತೆ ಎನ್ಸಿಸಿಯ ಸಕ್ರಿಯ ಸದಸ್ಯನಾಗಿದ್ದ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತಿದೆ. ಎನ್ಸಿಸಿಯನ್ನು ಬಲಪಡಿಸಲು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಾಲಕಿಯರ ಕ್ಯಾಡೆಟ್ಗಳು ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ. ಇದು ಬದಲಾಗುತ್ತಿರುವ ಭಾರತದ ಸಂಕೇತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇನ್ನು ಈ ವರ್ಷದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರಧಾನಿ ಮೋದಿ ತಮ್ಮ ಸಾಂಪ್ರದಾಯಿಕ ಪೇಟವನ್ನು ತೊರೆದು ಬ್ರಹ್ಮಕಮಲ ಚಿತ್ರವಿರುವ ಉತ್ತರಾಖಂಡದ ಸಾಂಪ್ರದಾಯಿಕ ಕ್ಯಾಪ್ ಧರಿಸಿದ್ದರು. ಬ್ರಹ್ಮಕಮಲ ಉತ್ತರಾಖಂಡ್ನ ರಾಜ್ಯ ಪುಷ್ಪವಾಗಿದೆ.