ಬೆಂಗಳೂರು: NET ಪರೀಕ್ಷೆಯಲ್ಲಿ ಕನ್ನಡ ಭಾಷೆ ಆಯ್ದಕೊಂಡ ವಿದ್ಯಾರ್ಥಿಗಳಿಗೆ ಹಿಂದಿ ಪ್ರಶ್ನೆ ಪತ್ರಿಕೆಗಳನ್ನು ನೀಡಿದ್ದು, ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇಂದು ಎನ್ಇಟಿ ಆನ್ ಲೈನ್ ಪರೀಕ್ಷೆಗಳು ಇದ್ದು, ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಹಾಲ್ ಗೆ ತೆರಳಿದ್ದರು. ಆದರೆ, ಪ್ರಶ್ನೆ ಪತ್ರಿಕೆ ಬದಲು ಬಂದಿದ್ದಕ್ಕೆ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ಪರೀಕ್ಷಾ ಮುಖ್ಯಸ್ಥರಿಗೆ ಮನವಿ ಮಾಡಿದರೆ ತಾಂತ್ರಿಕ ದೋಷದಿಂದ ಹೀಗೆ ಆಗಿದೆ. ಕೆಲವು ಸಮಯದ ನಂತರ ಸರಿಯಾಗುತ್ತೆ ಎಂದು ಹೇಳಿದ್ದಾರೆ.
ಆದರೆ, ಬರೋಬ್ಬರಿ 3 ಗಂಟೆಗಳಷ್ಟು ಸಮಯ ಕಾಯ್ದು ಕುಳಿತರೂ ಪ್ರಶ್ನೆ ಪತ್ರಿಕೆ ಪೂರೈಕೆ ಮಾಡಲಾಗಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.
ಸಲ್ಮಾನ್ ಖಾನ್ ಗೆ ಹಾವು ಕಡಿತ; ಆಸ್ಪತ್ರೆಗೆ ದಾಖಲು
ರಾಜ್ಯದಲ್ಲಿನ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಈ ರೀತಿಯ ಗೊಂದಲಗಳಾಗಿವೆ. ಹೀಗಾಗಿ ಹಲವಾರು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗುವಂತಾಗಿದೆ. ಆದರೆ, ಕೆಲವು ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಪ್ರಶ್ನೆ ಪತ್ರಿಕೆಗಳು ಸಿಕ್ಕಿವೆ ಎನ್ನಲಾಗುತ್ತಿದ್ದು, ಕೆಲವರ ಪ್ರಶ್ನೆ ಪತ್ರಿಕೆಯಲ್ಲಿ 60ಕ್ಕೂ ಹೆಚ್ಚು ಹಿಂದಿ ಭಾಷೆಯಲ್ಲಿಯೇ ಪ್ರಶ್ನೆಗಳು ಇವೆ ಎನ್ನಲಾಗುತ್ತಿದೆ. ಕೆಲವೆಡೆ ವಿದ್ಯಾರ್ಥಿಗಳು ಈ ಲೋಪವನ್ನು ಪ್ರಶ್ನೆ ಮಾಡಿದ್ದಕ್ಕೆ ಹಾಲ್ ನಿಂದ ಹೊರಗೆ ಹಾಕಿದ ಪ್ರಸಂಗಗಳು ಕೂಡ ನಡೆದಿವೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.