ಪ್ರವಾಸದ ವೇಳೆ ಪೋಷಕರು ಮೋಜು-ಮಸ್ತಿ ಮಾಡುತ್ತ ಮೈ ಮರೆತರೆ ಮಕ್ಕಳು ಎಂಥಹ ಅವಘಡಕ್ಕೆ ಸಿಲುಕಿಕೊಂಡಿದ್ದಾರೆ ಎಂಬುದಕ್ಕೆ ಇದೇ ಉದಾಹರಣೆ. ಈ ದೃಶ್ಯ ನೋಡಿದರೆ ಎದೆ ಝಲ್ ಎನಿಸುತ್ತದೆ.
ಜಲಪಾತದ ತುತ್ತತುದಿಯಲ್ಲಿ ನೀರಲ್ಲಿ ಆಟವಾಡುತ್ತಿದ್ದ ಮಕ್ಕಳಿಬ್ಬರು ಕಾಲು ಜಾರಿ ನೀರಿಗೆ ಬಿದ್ದಿದ್ದು, ಇನ್ನೇನು ಪ್ರಪಾತಕ್ಕೆ ಬೀಳುವಷ್ಟರಲ್ಲಿ ನೀರಿನ ರಭಸದ ನಡುವೆ ಕಲ್ಲುಗಳನ್ನು ಹಿಡಿದುಕೊಂಡು ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ.
ಚೀರಾಟ ಕೇಳಿ ಸುತ್ತಮುತ್ತಲಿದ್ದ ಜನರು ಓಡೋಡಿ ಬಂದಿದ್ದಾರೆ. ಸ್ವಲ್ಪ ಹೆಚ್ಚುಕಡಿಮೆಯಾದರೂ ಭೋರ್ಗರೆವ ಪ್ರಪಾತದ ಪಾಲಾಗುತ್ತಿದ್ದ ಮಕ್ಕಳನ್ನು ಪ್ರವಾಸಿಗರು ಜೀವದ ಹಂಗು ತೊರೆದು ರಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಮೈ ನಡುಗಿಸುವಂತಿದೆ.