
ಉದ್ಯಮಿಯ ಟ್ವಿಟ್ಟರ್ ಫೀಡ್ ಚಮತ್ಕಾರಿ ಮತ್ತು ಮೋಜಿನ ವಿಡಿಯೋಗಳು, ಮೋಜಿನ ಸಂಗತಿಗಳಿಂದ ತುಂಬಿದೆ. 66 ವರ್ಷದ ಉದ್ಯಮಿ ಇದೀಗ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಒಂದಲ್ಲ ಒಂದು ಸಮಸ್ಯೆಯೊಂದಿಗೆ ಹೋರಾಡುತ್ತಿರುವವರಿಗೆ ಈ ವಿಡಿಯೋ ನಿಜಕ್ಕೂ ಸ್ಪೂರ್ತಿಯ ಸೆಲೆಯಾಗಿದೆ.
ಉತ್ತರಾಖಂಡದ ಜೋಹರ್ ಕಣಿವೆಯಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಇದನ್ನು ಆರಂಭದಲ್ಲಿ ಮೇ 2020 ರಲ್ಲಿ ಶುಭಯಾತ್ರಾ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಜೋಹರ್ ಕಣಿವೆಯಲ್ಲಿರುವ ಮಿಲಾಮ್‌ಗೆ ಜನರು ಟ್ರಕ್‌ನಲ್ಲಿ ಕುಳಿತುಕೊಂಡು ಹೋಗುತ್ತಿರುವುದನ್ನು ವೈರಲ್ ವಿಡಿಯೋದಲ್ಲಿ ತೋರಿಸಲಾಗಿದೆ. ರಸ್ತೆಯ ಸ್ಥಿತಿ ಅಷ್ಟೊಂದು ಅನುಕೂಲಕರವಾಗಿಲ್ಲ. ಕಲ್ಲು-ಬಂಡೆ, ಎತ್ತರ ತಗ್ಗು, ಕಿರಿದಾದ ರಸ್ತೆಯಲ್ಲಿ ಟ್ರಕ್ ಚಲಿಸುತ್ತಾ ಮುಂದೆ ಸಾಗಿದೆ. ಕೆಳಗೆ ಪ್ರಪಾತವಿದ್ದರೂ ಯಾವುದೇ ಅಂಜಿಕೆಯಿಲ್ಲದೆ ಕುಂಟುತ್ತಾ ಟ್ರಕ್ ಜನರನ್ನು ಹೊತ್ತೊಯ್ದಿದೆ.
ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಇದನ್ನು ಅಪಾಯಕಾರಿ ಎಂದು ಕರೆದರೆ, ಇತರರು ರೈಡ್ ಅನ್ನು ರೋಮಾಂಚಕ ಎಂದು ಕರೆದಿದ್ದಾರೆ.