alex Certify ಎದೆಭಾಗ ಮುಚ್ಚುವುದಕ್ಕೆ ಎರಡು ಮೊಬೈಲ್ ಬಳಸಿಕೊಂಡ ಉರ್ಫಿ…! ಫ್ಯಾಶನ್ ಹೆಸರಲ್ಲಿ ಹುಚ್ಚಾಟ ಅಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆಭಾಗ ಮುಚ್ಚುವುದಕ್ಕೆ ಎರಡು ಮೊಬೈಲ್ ಬಳಸಿಕೊಂಡ ಉರ್ಫಿ…! ಫ್ಯಾಶನ್ ಹೆಸರಲ್ಲಿ ಹುಚ್ಚಾಟ ಅಂದ ನೆಟ್ಟಿಗರು

ಉರ್ಫಿ ಜಾವೇದ್, ಸೋಶಿಯಲ್ ಮೀಡಿಯಾ ಲೋಕದಲ್ಲಿ ಫೇಮಸ್ ಆಗಿರೋ ಹೆಸರಲ್ಲಿ ಈ ಹೆಸರು ಕೂಡಾ ಒಂದು. ಈಕೆಯ ಖಾಸ್‌ಬಾತ್‌ ಏನಂದ್ರೆ, ಈಕೆ ಧರಿಸೋ ಚಿತ್ರ ವಿಚಿತ್ರ ಉಡುಗೆಗಳು. ಈಕೆ ಹಾಕುವ ಬಟ್ಟೆಗಳು ನೋಡ್ತಿದ್ರೆ ಎಂಥವರೂ ಕೂಡಾ ದಂಗಾಗಿ ಬಿಡ್ತಾರೆ. ಫ್ಯಾಷನ್ ಹೆಸರಲ್ಲಿ ಹುಚ್ಚಾಟ ಆಡೋ ಈಕೆ, ಪ್ಯಾಪರಾಜಿ ಕಂಡಲೆಲ್ಲ ಪೋಸ್ ಕೊಡ್ತಾ ನಿಂತು ಬಿಡ್ತಾಳೆ. ಇದೆಲ್ಲ ಪಬ್ಲಿಸಿಟಿ ಸ್ಲಂಟ್ ಅನ್ನೋದು ಅನೇಕರ ಅಭಿಪ್ರಾಯ.‌

ಹಿಂದಿ ಬಿಗ್‌ಬಾಸ್‌ ಸ್ಪರ್ಧಿಯಾಗಿ ಭಾಗವಹಿಸಿದ್ದ ಈಕೆ ಈಗ ಮತ್ತೆ ಸುದ್ದಿಯಲ್ಲಿದ್ದಾಳೆ. ಈ ಬಾರಿ ಸುದ್ದಿಯಲ್ಲಿ ಇರೋದಕ್ಕೆ ಕಾರಣ ಈಕೆ ಧರಿಸಿರೋ ಉಡುಗೆ. ಎರಡು ಸ್ಮಾರ್ಟ್ ಫೋನ್‌ಗಳಿಂದ ತನ್ನ ಅಮೂಲ್ಯ ಆಸ್ತಿಯನ್ನ ರಕ್ಷಿಸಿಕೊಂಡಿದ್ದಾಳೆ. ಅಂದರೆ ಈಕೆ ಎರಡು ಮೊಬೈಲ್‌ಗಳನ್ನ ಇಟ್ಟುಕೊಂಡು ತನ್ನ ಎದೆಯ ಕವಚದ ರೀತಿ ಧರಿಸಿಕೊಂಡಿದ್ದಾಳೆ. ಪ್ರತಿ ಬಾರಿ ಉಡುಗೆಗಿಂತಲೂ ಈ ಬಾರಿಯ ಉಡುಗೆ ಇನ್ನಷ್ಟು ಈಕೆಯ ದೇಹವನ್ನ ಪ್ರದರ್ಶನಕ್ಕೆ ಇಟ್ಟ ಹಾಗಿದೆ. ಇಷ್ಟೆ ಆಗಿದ್ದರೆ ಒಂದು ಮಾತಿತ್ತು. ಈ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಅದರ ಶೀರ್ಷಿಕೆಯಲ್ಲಿ ‘ಫುಲ್ ಚಾರ್ಜಡ್‘ ಅಂತ ಬರೆದುಕೊಂಡಿದ್ದಾಳೆ.

ಇದನ್ನ ನೋಡಿ ನೆಟ್ಟಿಗರು ಈಗ ಉರ್ಫಿಯನ್ನ ಹಾಗೂ ಆಕೆಯ ಫ್ಯಾಶನ್‌ ಸೆನ್ಸ್‌ನ್ನ ಲೇವಡಿ ಮಾಡಿದ್ದಾರೆ. ಸ್ಮಾರ್ಟ್‌ಫೋನ್ ಇಷ್ಟೊಂದು ಚೀಪ್ ಆಯ್ತಾ ಎಂದು ಪ್ರಶ್ನಿಸಿದರೆ ಮತ್ತೆ ಕೆಲವರು ಈಕೆಗೆ ಬೇರೆ ಇನ್ನೇನು ಸಿಗ್ಲಿಲ್ವಾ ಅಂತ ಬರೆದಿದ್ದಾರೆ. ಅಷ್ಟೆ ಅಲ್ಲ ಮೊಬೈಲ್‌ನಿಂದ ಎದೆಮುಚ್ಚಿಕೊಂಡಿದ್ದಾಯ್ತು, ಲ್ಯಾಬ್‌ಟಾಪ್‌ನಿಂದ ಸ್ಕರ್ಟ್ ಮಾಡ್ಕೊಳ್ಳೊದಲ್ವಾ ಅಂತ ಆಕೆಗೆ ಬಿಟ್ಟಿ ಸಲಹೆಯನ್ನ ಕೂಡಾ ಕೊಟ್ಟಿದ್ದಾರೆ.

ಇತ್ತೀಚೆಗಷ್ಟೇ ಉರ್ಫಿ ಬಿಕಿನಿ ಧರಿಸಿಕೊಂಡು ರಸ್ತೆಗಳಿದಿದ್ದಳು. ಈ ಹಿನ್ನೆಲೆಯಲ್ಲಿ ಉರ್ಫಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ತನ್ನ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಸಿಟ್ಟಿಗೆದ್ದ ಉರ್ಫಿ ಇದು ಪಾಕಿಸ್ತಾನ, ಅಫ್ಘಾನಿಸ್ತಾನ ಅಲ್ಲ ಭಾರತ. ನಾನು ಪ್ರಚಾರಕ್ಕೋಸ್ಕರ ಹೀಗೆ ಮಾಡುತ್ತಿದ್ದೇನೆ ಎಂದು ಬಹುತೇಕರು ಅಂದುಕೊಂಡಿದ್ದಾರೆ ಆದರೆ ನನ್ನಿಂದ ಆನೇಕರಿಗೆ ಪ್ರಚಾರ ಸಿಗುತ್ತಿದೆ ಎಂದೆಲ್ಲಾ ಬೊಬ್ಬೆ ಹೊಡೆದಿದ್ದಳು. ಅಲ್ಲದೇ ರೇಪಿಸ್ಟ್‌ಗಳ ಮೇಲೆ ಕೇಸ್ ಹಾಕಬೇಕು ನನ್ನ ಮೇಲೆ ಏಕೆ ಪ್ರಕರಣ ದಾಖಲಿಸುತ್ತೀರಿ ಎಂದು ಕೆಂಡ ಕಾರಿದ್ದಳು. ಸುದ್ದಿಯಲ್ಲಿ ಇರಬೇಕೆಂದರೆ ಜನ ಏನೆಲ್ಲಾ ಮಾಡ್ತಾರೆ ಅನ್ನೋದಕ್ಕೆ ಉರ್ಫಿ ಜಾವೇದ್ ಉತ್ತಮ ಉದಾಹರಣೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...