ಪ್ರತಿ ದಿನ ನಮ್ಮ ಜೀವನದಲ್ಲಿ ಸಣ್ಣ-ಪುಟ್ಟ ಘಟನೆಗಳು ನಡೆಯುತ್ತಿರುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಣ್ಣ-ಸಣ್ಣ ಘಟನೆಗಳಿಗೂ ಮಹತ್ವದ ಸ್ಥಾನ ನೀಡಲಾಗಿದೆ. ಈ ಘಟನೆಗಳು ಮುಂದಾಗುವ ಶುಭ, ಅಶುಭ ಘಟನೆಗಳಿಗೆ ಮುನ್ಸೂಚನೆ ಎನ್ನಲಾಗುತ್ತದೆ. ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಜೀವನದಲ್ಲಾಗುವ ಸಣ್ಣಪುಟ್ಟ ಘಟನೆಗಳು ಯಾವುದರ ಮುನ್ಸೂಚನೆ ಎಂಬುದನ್ನು ನಾವು ಹೇಳ್ತೇವೆ.
ಮನೆಯ ಯಾವುದಾದ್ರೂ ನಲ್ಲಿಯಿಂದ ನೀರು ತೊಟ್ಟಿಕ್ಕುತ್ತಿದ್ದರೆ ಇದು ಶುಭ ಸಂಕೇತವಲ್ಲ. ಇದ್ರಿಂದ ಆರ್ಥಿಕ ನಷ್ಟವಾಗಲಿದೆ ಎಂದರ್ಥ. ಹಾಗಾಗಿ ನಲ್ಲಿ ಹಾಳಾದ ತಕ್ಷಣ ದುರಸ್ಥಿ ಮಾಡಬೇಕು.
ಕಾರಣವಿಲ್ಲದೆ ಕುಟುಂಬಸ್ಥರು ಜಗಳವಾಡ್ತಿದ್ದರೆ ಇದು ಕೂಡ ಒಳ್ಳೆಯ ಸಂಕೇತವಲ್ಲ. ಜಗಳ ಕೂಡ ಮುಂದಿನ ಆರ್ಥಿಕ ನಷ್ಟಕ್ಕೆ ಮುನ್ಸೂಚನೆ ಎನ್ನಲಾಗಿದೆ.
ಬಾಯಿಯಿಂದ ಲಾಲಾರಾಸ ಹೆಚ್ಚಿನ ಪ್ರಮಾಣದಲ್ಲಿ ಬರ್ತಿದ್ದರೆ ಅದಕ್ಕೂ ಒಂದು ಕಾರಣವಿದೆ. ಲಾಲಾರಸ ಹೆಚ್ಚಿಗೆ ಬರ್ತಿದ್ದರೆ ಧನಹಾನಿಯಾಗಲಿದೆ ಎಂದುಕೊಳ್ಳಿ.
ಮನೆಯಲ್ಲಿ ಸಾಕಿದ ಮುದ್ದು ನಾಯಿ, ಬೆಕ್ಕು ಅಥವಾ ಇನ್ನಾವುದೋ ಸಾಕು ಪ್ರಾಣಿ ಅಚಾನಕ್ ಸಾವನ್ನಪ್ಪಿದ್ರೆ ಇದು ಕೆಟ್ಟ ಸುದ್ದಿಗೆ ಮುನ್ಸೂಚನೆ. ಮನೆಯಲ್ಲಿ ದೊಡ್ಡ ದುರ್ಘಟನೆ ನಡೆಯಲಿದೆ ಎಂದರ್ಥ.
ಕೈಜಾರಿ ಎಣ್ಣೆ ನೆಲಕ್ಕೆ ಬಿದ್ರೆ ಶುಭವಲ್ಲ. ಇದು ದುರಾದೃಷ್ಟಕ್ಕೆ ಕಾರಣವಾಗುತ್ತದೆ. ಮುಂದಿನ ದಿನಗಳಲ್ಲಿ ದೊಡ್ಡ ಆರ್ಥಿಕ ಖರ್ಚು ನಿಮ್ಮ ತಲೆ ಮೇಲೆ ಬರಲಿದೆ ಎಂದರ್ಥ.