ಆವಕಾಡೊ ಹೆಚ್ಚು ಪೌಷ್ಟಿಕಾಂಶಯುಕ್ತ ಹಣ್ಣು. ಇದರಲ್ಲಿ 20 ಬಗೆಯ ಜೀವಸತ್ವಗಳು ಮತ್ತು ಖನಿಜಗಳಿವೆ. ಇದು ಚರ್ಮದ ಆರೈಕೆಗೆ ಉತ್ತಮವಾಗಿದೆ. ಹಾಗಾಗಿ ಇದನ್ನು ಒಣ ಹಾಗೂ ಎಣ್ಣೆಯುಕ್ತ ಚರ್ಮದವರು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳಿ.
* ಒಣ ಚರ್ಮ ಹೊಂದಿರುವವರು ಆವಕಾಡೊ ತಿರುಳನ್ನು ತೆಗೆದುಕೊಂಡು ಬಾದಾಮಿ, ಜೇನುತುಪ್ಪ ಮತ್ತು ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ವಾಶ್ ಮಾಡಿ. ಇದು ಒಣ ಚರ್ಮದ ತೇವಾಂಶವನ್ನು ಕಾಪಾಡಿ, ಸುಕ್ಕುಗಳು, ಚರ್ಮ ಬಿರುಕು ಬಿಡುವುದರಿಂದ ರಕ್ಷಿಸುತ್ತದೆ.
* ಎಣ್ಣೆಯುಕ್ತ ಚರ್ಮದವರು 2 ಚಮಚ ಆವಕಾಡೊ ತಿರುಳು ಮತ್ತು 2 ಚಮಚ ಮೊಸರು, 3 ಚಮಚ ಗ್ರಾಂ ಹಿಟ್ಟನ್ನು ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ವಾಶ್ ಮಾಡಿ. ಇದು ಚರ್ಮದ ತೇವಾಂಶವನ್ನು ಲಾಕ್ ಮಾಡುತ್ತದೆ. ಹೆಚ್ಚುವರಿ ಎಣ್ಣೆಯಂಶವನ್ನು ನಿವಾರಿಸುತ್ತದೆ.