ಎಸಿಡಿಟಿ ಕೇಳಲು ತುಂಬಾ ಚಿಕ್ಕ ಸಮಸ್ಯೆ ಎನ್ನಿಸುತ್ತದೆ. ಆದ್ರೆ ಅದನ್ನು ಅನುಭವಿಸುವವರಿಗೆ ಮಾತ್ರ ಅದ್ರ ಕಷ್ಟ ಗೊತ್ತು. ಇದ್ರಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ.
ಇದ್ರಿಂದ ಮುಕ್ತಿ ಪಡೆಯಲು ಅನೇಕ ಔಷಧಿಗಳ ಪ್ರಯೋಗ ಮಾಡ್ತಾರೆ. ಆದ್ರೆ ಫಲಿತಾಂಶ ಮಾತ್ರ ಶೂನ್ಯ. ಆಹಾರ ಸರಿಯಾಗಿ ಜೀರ್ಣವಾಗದೆ ಹೋದಾಗ ಮಲಬದ್ಧತೆ, ಎಸಿಡಿಟಿ ಕಾಡುತ್ತದೆ. ಕೆಲ ಮನೆ ಮದ್ದುಗಳನ್ನು ಬಳಸಿ ಎಸಿಡಿಟಿಯಿಂದ ನೆಮ್ಮದಿ ಪಡೆಯಬಹುದು.
ಒಂದು ಲವಂಗ ಎಸಿಡಿಟಿ ಕಡಿಮೆ ಮಾಡುವ ಶಕ್ತಿ ಹೊಂದಿದೆ. ಲವಂಗ, ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಎಸಿಡಿಟಿ ಸಮಸ್ಯೆ ನಿಮ್ಮನ್ನು ಕಾಡಿದ್ರೆ ಬಾಯಿಗೆ ನಾಲ್ಕು ಲವಂಗ ಹಾಕಿಕೊಂಡು ಸಣ್ಣಗೆ ಜಗಿದು ತಿನ್ನಿ. ಹೀಗೆ ಮಾಡಿದ್ರೆ ಕೆಲವೇ ನಿಮಿಷದಲ್ಲಿ ಎಸಿಡಿಟಿ ಮಾಯವಾಗುತ್ತದೆ.
ಸೋಂಪು ಫ್ಲೇವನಾಯ್ಡ್ ಗುಣವನ್ನು ಹೊಂದಿರುತ್ತದೆ. ಇದು ಅಲ್ಸರ್ ವಿರುದ್ಧ ಕೆಲಸ ಮಾಡುತ್ತದೆ. ನಿಮಗೆ ಎಸಿಡಿಟಿ ಸಮಸ್ಯೆ ಕಾಡಿದ್ರೆ ರಾತ್ರಿ ಸ್ವಲ್ಪ ಸೋಂಪನ್ನು ನೀರಿನಲ್ಲಿ ನೆನೆಸಿಡಿ. ಆ ನೀರನ್ನು ಬೆಳಿಗ್ಗೆ ಕುಡಿದ್ರೆ ಎಸಿಡಿಟಿ ಕಡಿಮೆಯಾಗುತ್ತದೆ.
ಏಲಕ್ಕಿ ಕೂಡ ಎಸಿಡಿಟಿಗೆ ಬಹಳ ಒಳ್ಳೆಯದು. ಒಂದು ಅಥವಾ ಎರಡು ಏಲಕ್ಕಿಯ ಸಿಪ್ಪೆ ತೆಗೆದು ಕಾಳುಗಳನ್ನು ನೀರಿನಲ್ಲಿ ಹಾಕಿ ಕುದಿಸಿ. ತಣ್ಣಗಾದ್ಮೇಲೆ ಈ ನೀರನ್ನು ಕುಡಿಯಿರಿ. ಕೆಲವೇ ನಿಮಿಷದಲ್ಲಿ ನೆಮ್ಮದಿ ಎನ್ನಿಸುತ್ತದೆ.
ಬಾಳೆಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಎಸಿಡಿಟಿ ನಿಯಂತ್ರಿಸುವ ಗುಣ ಇದ್ರಲ್ಲಿದೆ. ಬೇಸಿಗೆಯಲ್ಲಿ ಎಸಿಡಿಟಿಯಿಂದ ಬಳಲುವವರು ಬಾಳೆಹಣ್ಣಿನ ಸೇವನೆ ಮಾಡಬೇಕು.
ತುಳಸಿ ಎಲೆ ಎಸಿಡಿಟಿಯಿಂದ ತಕ್ಷಣ ಬಿಡುಗಡೆ ನೀಡುತ್ತದೆ. ತುಳಸಿ ಎಲೆ ಹೊಟ್ಟೆಯಲ್ಲಿರುವ ಆಮ್ಲದ ಅಂಶವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಆಹಾರ ಸೇವನೆ ಮಾಡಿದ ನಂತ್ರ ತುಳಸಿ ಎಲೆಗಳ ಸೇವನೆ ಮಾಡಿ.