alex Certify ಎಡಬದಿಗೆ ತಿರುಗಿ ಮಲಗುವುದರಿಂದ ಇದೆ ಇಷ್ಟೆಲ್ಲಾ ʼಪ್ರಯೋಜನʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಡಬದಿಗೆ ತಿರುಗಿ ಮಲಗುವುದರಿಂದ ಇದೆ ಇಷ್ಟೆಲ್ಲಾ ʼಪ್ರಯೋಜನʼ

ಮಲಗುವಾಗ ನಾವು ಯಾವ ಬದಿ ತಿರುಗಿ ಮಲಗಬೇಕು? ಯಾವ ಬದಿಗೆ ಹೊರಳಿ ಮಲಗಿದರೆ ಉತ್ತಮ ಅನ್ನುವ ಪ್ರಶ್ನೆ ಕಾಡುತ್ತದೆ. ನಿಜಕ್ಕೂ ಎಡಬದಿಗೆ ಹೊರಳಿ ಮಲಗುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ.

ಜೀರ್ಣಕ್ರಿಯೆ

ಹೊಟ್ಟೆ ಹಾಗೂ ಜೀರ್ಣಗ್ರಂಥಿ ಇರುವುದು ಎಡಭಾಗದಲ್ಲಿ. ಹಾಗಾಗಿ ಎಡಬದಿಗೆ ಹೊರಳಿ ಮಲಗುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಆಹಾರ ಸುಲಭವಾಗಿ ಹೊಟ್ಟೆ ಸೇರುತ್ತದೆ ಮತ್ತು ಆಹಾರದಲ್ಲಿರುವ ಬೇಡದ ಅಂಶ ಬೇಗನೇ ಬೇರ್ಪಡುತ್ತದೆ. ಊಟವಾದ ತಕ್ಷಣ ಕನಿಷ್ಠ 10 ನಿಮಿಷ ಈ ರೀತಿ ಎಡಬದಿಗೆ ಹೊರಳಿ ಮಲಗುವುದು ಒಳ್ಳೆಯದು.

ಹೃದಯದ ಆರೋಗ್ಯಕ್ಕೆ

ಎಡ ಭಾಗಕ್ಕೆ ಹೊರಳಿ ಮಲಗುವುದರಿಂದ ಹೃದಯಕ್ಕೆ ರಕ್ತ ಸಂಚಾರ ಸುಗಮವಾಗುತ್ತದೆ. ಇದರಿಂದ ಹೃದಯಕ್ಕೂ ಸ್ವಲ್ಪ ವಿಶ್ರಾಂತಿ ದೊರಕುತ್ತದೆ.

ಗರ್ಭಿಣಿ ಮಹಿಳೆಯರು

ಗರ್ಭಿಣಿ ಮಹಿಳೆಯರು ಎಡಭಾಗಕ್ಕೆ ತಿರುಗಿ ಮಲಗಲು ವೈದ್ಯರು ಸಲಹೆ ನೀಡುತ್ತಾರೆ. ಇದರಿಂದ ಗರ್ಭಕೋಶಕ್ಕೆ ಹೆಚ್ಚು ರಕ್ತ ಪೂರೈಕೆಯಾಗುತ್ತದೆ. ಅಲ್ಲದೆ ಗರ್ಭಿಣಿಯಾಗಿದ್ದಾಗ ಬೆನ್ನುಲುಬಿಗೆ ಹೆಚ್ಚಿನ ಶ್ರಮವಿರುತ್ತದೆ. ಹೀಗೆ ಮಲಗುವುದರಿಂದ ಬೆನ್ನುಲುಬಿಗೂ ವಿಶ್ರಾಂತಿ ಸಿಗುತ್ತದೆ.

ಗೊರಕೆ ಹೊಡೆಯುವುದಕ್ಕೆ

ಗೊರಕೆ ಹೊಡೆಯುವವರು ಎಡಭಾಗಕ್ಕೆ ಹೊರಳಿ ಮಲಗಿದರೆ ಗೊರಕೆ ಹೊಡೆಯುವುದು ಕಡಿಮೆಯಾಗುತ್ತದೆ. ಹೀಗೆ ಮಲಗುವುದರಿಂದ ಗಂಟಲು ಮತ್ತು ಬಾಯಿ ತೆರೆದುಕೊಳ್ಳುವುದರ ಸಂಭವ ಇಲ್ಲ. ಇದರಿಂದ ಉಸಿರಾಟ ಸರಾಗವಾಗುವುದಲ್ಲದೆ, ಗೊರಕೆ ಶಬ್ಧವೂ ಹೊರಬರದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...