ಪುರುಷರು ಬಳಸುವ ಕಾಮೋತ್ತೇಜಕ ವಯಾಗ್ರ ಎಂಬ ಮಾತ್ರೆಯ ದುಷ್ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಆಘಾತಕಾರ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ವಯಾಗ್ರ ಸೇವನೆ ದೃಷ್ಟಿಗೆ ಹಾನಿ ಉಂಟುಮಾಡುತ್ತದೆ. ಅಷ್ಟೇ ಅಲ್ಲ ಕುರುಡರನ್ನಾಗಿ ಮಾಡಿಬಿಡುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.
ನಿಮಿರುವಿಕೆಗಾಗಿ ವಯಾಗ್ರ ಮಾತ್ರೆಗಳನ್ನು ಸೇವಿಸುವವರಿಗೆ ಹಠಾತ್ತನೆ ದೃಷ್ಟಿಯೇ ಹೋಗಿಬಿಡುತ್ತದೆ. ಕಪ್ಪು ಕಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ವಯಾಗ್ರ ಮಾತ್ರೆ ತಿನ್ನುವುದರಿಂದ ಜನನಾಂಗಗಳಿಗೆ ರಕ್ತದ ಹರಿವು ಹೆಚ್ಚಾಗುತ್ತದೆ, ಆಗ ಕಣ್ಣುಗಳಿಗೆ ರಕ್ತದ ಪೂರೈಕೆ ಸ್ಥಗಿತಗೊಳ್ಳುವುದರಿಂದ ಕುರುಡುತನ ಉಂಟಾಗುತ್ತದೆ.
ಇದಲ್ಲದೆ ಸಿಯಾಲಿಸ್, ಲೆವಿಟ್ರಾ ಮತ್ತು ಸ್ಪೆಡ್ರಾ ಕೂಡ ಕಣ್ಣಿನ ಸಮಸ್ಯೆಗಳ ಸಂಭಾವ್ಯ ಪ್ರಚೋದಕಗಳೆಂದು ಸಂಶೋಧಕರು ಹೆಸರಿಸಿದ್ದಾರೆ. ವಯಾಗ್ರ ಮಾತ್ರೆಗಳನ್ನು ನಿಯಮಿತವಾಗಿ ಬಳಸುವವರು ದೃಷ್ಟಿಯನ್ನೇ ಕಳೆದುಕೊಳ್ಳುವ ಅಪಾಯ ಶೇ.85 ರಷ್ಟಿರುತ್ತದೆ. ಅಮೆರಿಕದಲ್ಲಿ ಪ್ರತಿ ತಿಂಗಳು ಇಂತಹ ಕಾಮೋತ್ತೇಜಕ ಔಷಧಗಳ ಸುಮಾರು 20 ಮಿಲಿಯನ್ ಪ್ರಿಸ್ಕ್ರಿಪ್ಷನ್‌ಗಳನ್ನು ವಿತರಿಸಲಾಗುತ್ತದೆ.
ಇನ್ನಾದರೂ ವೈದ್ಯರು ಹಾಗೂ ವಯಾಗ್ರ ಬಳಸಲು ಇಚ್ಛಿಸುವವರು ಎಚ್ಚೆತ್ತುಕೊಳ್ಳುವುದು ಒಳಿತು. ನಿಯಮಿತವಾಗಿ ಕಾಮೋತ್ತೇಜಕ ಔಷಧಗಳನ್ನು ಬಳಸುತ್ತಿದ್ರೆ, ಅಂಥವರಿಗೇನಾದ್ರೂ ದೃಷ್ಟಿ ಸಂಬಂಧಿಸಿದ ಸಮಸ್ಯೆಗಳು ಶುರುವಾದ್ರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಇಲ್ಲದೇ ಹೋದಲ್ಲಿ ಶಾಶ್ವತವಾಗಿ ಅಂಧರಾಗುವ ಅಪಾಯವಿರುತ್ತದೆ.