ಮುಖದ ಸೌಂದರ್ಯಕ್ಕೆ ಜನರು ಹೆಚ್ಚಿನ ಮಹತ್ವ ನೀಡ್ತಾರೆ. ಮುಖದ ಮೇಲಿರುವ ಅನಗತ್ಯ ಕೂದಲನ್ನು ಕತ್ತರಿಸುತ್ತೇವೆ. ಹಾಗೆ ಮೂಗಿನ ಒಳಗಿರುವ ಕೂದಲನ್ನು ಕೆಲವರು ತೆಗೆಯುತ್ತಾರೆ. ಆದ್ರೆ ಈ ಕೂದಲು ತೆಗೆಯುವುದ್ರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ.
ಮೂಗಿನಲ್ಲಿ ಎರಡು ರೀತಿಯ ಕೂದಲಿರುತ್ತದೆ. ಒಂದು ಚಿಕ್ಕ ಕೂದಲಾದ್ರೆ ಇನ್ನೊಂದು ದಪ್ಪ ಕೂದಲು. ಮೂಗಿನಲ್ಲಿರುವ ಕೂದಲು ದೇಹದ ರಕ್ಷಣೆ ಕೆಲಸ ಮಾಡುತ್ತದೆ. ಉಸಿರಾಡುವಾಗ ಆಮ್ಲಜನಕವನ್ನು ಶುದ್ಧಗೊಳಿಸುವ ಜೊತೆಗೆ ಬ್ಯಾಕ್ಟೀರಿಯಾ, ಧೂಳು ಒಳ ಹೋಗದಂತೆ ರಕ್ಷಿಸುತ್ತದೆ. ಒಂದು ವೇಳೆ ಮೂಗಿನಲ್ಲಿರುವ ಕೂದಲನ್ನು ಕತ್ತರಿಸಿದ್ರೆ ಬ್ಯಾಕ್ಟೀರಿಯಾ ಕೂಡ ದೇಹ ಸೇರುತ್ತದೆ.
ಮೂಗಿನಲ್ಲಿ ರಕ್ತನಾಳವಿದೆ. ಮೆದುಳಿನ ಜೊತೆ ಇದು ಸಂಪರ್ಕ ಹೊಂದಿದೆ. ಮೂಗಿನ ಕೂದಲನ್ನು ಎಳೆಯುವುದ್ರಿಂದ ರಕ್ತನಾಳದಲ್ಲಿ ರಂಧ್ರವುಂಟಾಗುತ್ತದೆ.ಇದ್ರಿಂದ ರಕ್ತ ಹೊರ ಬರುತ್ತದೆ. ಇದು ಸೋಂಕಿಗೆ ಕಾರಣವಾಗಿ ವ್ಯಕ್ತಿ ಸಾವನ್ನಪ್ಪುತ್ತಾನೆ.
ಮೂಗಿನ ಕೂದಲು ದೇಹಕ್ಕೆ ಒಳ್ಳೆಯದಾಗಿರುವ ಕಾರಣ ಯಾವುದೇ ಕಾರಣಕ್ಕೂ ಮೂಗಿನ ಕೂದಲನ್ನು ಕತ್ತರಿಸಬೇಡಿ. ಕೂದಲನ್ನು ಕತ್ತರಿಸುವುದು ಅತ್ಯಗತ್ಯವೆಂದ್ರೆ ಸಣ್ಣ ಕತ್ತರಿಯಿಂದ ಮೂಗಿನ ಕೂದಲನ್ನು ಕತ್ತರಿಸಿ. ನೋಸ್ ಹೇರ್ ಟ್ರಿಮ್ಮರ್ ಬಳಕೆ ಮಾಡಿ. ಯಾವುದೇ ಕಾರಣಕ್ಕೂ ಮುಂಜಾಗ್ರತೆಯಿಲ್ಲದೆ ಕೂದಲನ್ನು ಕತ್ತರಿಸಿ ಆಪತ್ತು ತಂದುಕೊಳ್ಳಬೇಡಿ.