ದೇಹದಿಂದ ವಿಷಕಾರಿ ಪದಾರ್ಥ ಹೊರ ಹೋಗುವುದು ಬಹಳ ಅಗತ್ಯ. ಆದ್ರೆ ಕೆಲವರು ರಾತ್ರಿ 3-4 ಬಾರಿ ಮೂತ್ರಕ್ಕೆ ಎದ್ದು ಹೋಗ್ತಾರೆ. ಇದ್ರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. ಪದೇ ಪದೇ ಮೂತ್ರಕ್ಕೆ ಹೋಗಲು ಅನೇಕ ಕಾರಣಗಳಿವೆ. ಹೆಚ್ಚಾಗುತ್ತಿರುವ ವಯಸ್ಸು, ಹಾರ್ಮೋನ್ ನಲ್ಲಿ ಏರುಪೇರು ಹೀಗೆ ಅನೇಕ ಕಾರಣಗಳಿಂದ ಈ ಸಮಸ್ಯೆ ಕಾಡುತ್ತದೆ.
ಆಗಾಗ ಮೂತ್ರಕ್ಕೆ ಹೋಗುವ ಸಮಸ್ಯೆ ನಿಮಗೂ ಇದ್ದಲ್ಲಿ ಅಗತ್ಯವಾಗಿ ವೈದ್ಯರನ್ನು ಭೇಟಿ ಮಾಡಿ.
ಸ್ಲೀಪ್ ಅಪ್ನಿಯ : ರಾತ್ರಿ ನಿದ್ರೆ ವೇಳೆ ಉಸಿರುಗಟ್ಟಿದಂತಾಗಿ ಉಸಿರಾಡಲು ತೊಂದರೆಯಾಗುತ್ತದೆ. ಇದ್ರಿಂದ ನಿದ್ರೆ ಹಾಳಾಗುತ್ತದೆ. ರಕ್ತದೊತ್ತಡದಂತ ಸಮಸ್ಯೆ ಶುರುವಾಗಿ ಪದೇ ಪದೇ ಮೂತ್ರಕ್ಕೆ ಹೋಗಬೇಕೆನ್ನಿಸುತ್ತದೆ.
ಕೆಫೀನ್ ಸೇವನೆ : ಮಲಗುವ ಮೊದಲು ಕಾಫಿ ಕುಡಿದು ಮಲಗುವ ಅಭ್ಯಾಸ ಕೆಲವರಿಗಿರುತ್ತದೆ. ಆದ್ರೆ ಇದು ರಾತ್ರಿ ಪದೇ ಪದೇ ಮೂತ್ರಕ್ಕೆ ಹೋಗಬೇಕೆನ್ನಿಸುತ್ತದೆ.
ಮೂತ್ರಪಿಂಡದ ಕಾಯಿಲೆ : ಮೂತ್ರಪಿಂಡದ ಕೆಲ ಸಮಸ್ಯೆ ಪುರುಷರಿಗೆ ಹೋಲಿಸಿದ್ರೆ ಮಹಿಳೆಯರಿಗೆ ಜಾಸ್ತಿ. ಇಂಟರ್ಸ್ಟೀಶಿಯಲ್ ಸಮಸ್ಯೆಯಲ್ಲಿ ಪದೇ ಪದೇ ಮೂತ್ರಕ್ಕೆ ಹೋಗಬೇಕೆನ್ನಿಸುತ್ತದೆ. ಜೊತೆಗೆ ನೋವು ಕೂಡ ಕಾಣಿಸಿಕೊಳ್ಳುತ್ತದೆ. ಮುಟ್ಟಿನ ವೇಳೆ ಹಾಗೂ ಸಂಬಂಧ ಬೆಳೆಸುವ ವೇಳೆ ನೋವು ಹೆಚ್ಚಾಗುತ್ತದೆ.
ಯುಟಿಐ : ಖಾಸಗಿ ಅಂಗದಲ್ಲಿ ನೋವು ಕಾಡುತ್ತದೆ. ಇದು ಕಿರಿಕಿರಿಯುಂಟು ಮಾಡುತ್ತದೆ. ಈ ಕಾಯಿಲೆಯಿಂದ ಬಳಲುವವರಿಗೆ ತುರಿಕೆ, ನೋವು, ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕೆನ್ನಿಸುತ್ತದೆ.